ಎಚ್ ಡಿ ಕುಮಾರಸ್ವಾಮಿ ಬೆನ್ನಿಗೆ ನಿಂತ ಎನ್ ಮಹೇಶ್ ಹೇಳಿದ್ದು ಹೀಗೆ..!!
ಮೈತ್ರಿ ಸರ್ಕಾರದಲ್ಲಿ ಮೊದಲು ರಾಜೀನಾಮೆ ಕೊಟ್ಟ ಎನ್ ಮಹೇಶ್ ಅವರು ಮಾಧ್ಯಮದ ಮುಂದೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಪಕ್ಷಸಂಘಟನೆ ಮಾಡಲು ಮತ್ತು ಕ್ಷೇತ್ರದ ಜನರೊಂದಿಗೆ ಬೆರೆಯಲು ಸಮಯದ ಅಭಾವವಿದ್ದ ಕಾರಣ ರಾಜೀನಾಮೆ ಕೊಟ್ಟಿರುವುದಾಗಿ ತಿಳಿಸಿದ್ದಾರೆ. ನಾನು ರಾಜೀನಾಮೆ ಕೊಟ್ಟರೂ ನನ್ನ ಬೆಂಬಲವಿರುವುದು ಎಂದಿಗೂ ಕುಮಾರಸ್ವಾಮಿ ಸರಕಾರಕ್ಕೆ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ. ರಾಜ್ಯದಲ್ಲಿ ನಡೆಯುವ ಉಪಚುನಾವಣೆಯಲ್ಲಿ ಎಲ್ಲೆಲ್ಲಿ ಜೆಡಿಎಸ್'ನ ಅಭ್ಯರ್ಥಿಗಳು ನಿಲ್ಲುತ್ತಾರೋ ಅಲ್ಲೆಲ್ಲ ಚುನಾವಣಾ ಪ್ರಚಾರಕ್ಕೆ ಹೋಗುವುದಾಗಿ ಸ್ಪಷ್ಟ ಪಡಿಸಿದ್ದಾರೆ.
Comments