ಹೇಮಾವತಿಪೇಟೆಯಲ್ಲಿ ಬೆಳಗಿನಜಾವ 4 ರಿಂದಲೇ ಮದ್ಯ ಮಾರಾಟ ಜಿಲ್ಲಾಧಿಕಾರಿಗೆ ದೂರು
ಹೇಮಾವತಿಪೇಟೆಯಲ್ಲಿರುವ ಬಾರ್ ನಲ್ಲಿ ಬೆಳಿಗಿನ ಜಾವ 4 ಘಂಟೆಯಿಂದಲೇ ಕಿಟಕಿಯ ಮೂಲಕ ಮದ್ಯ ಮರಾಟ ಮಾಡಲಾಗುತ್ತಿದೆ, ಗಾಂಧಿ ಜಯಂತಿಯಂದು ಬಾರ್ ಮುಚ್ಚಿರುವಾಗ ಎದುರಿನಲ್ಲಿರುವ ಗುಜರಿ ಅಂಗಡಿಯಲ್ಲಿ ಅನಧಿಕೃತವಾಗಿ ಮದ್ಯ ಮರಾಟ ಮಾಡಲಾಗುತ್ತಿದೆ ಎಂದು ಸ್ಥಳೀಯ ನಿವಾಸಿ ಪರಪ್ಪಸ್ವಾಮಿ ದೂರುನೀಡಿ ಇದನ್ನು ನಿಲ್ಲಿಸುವಂತೆ ಅಗ್ರಹಿಸಿದರು. ಹೇಮಾವತಿಪೇಟೆಯಲ್ಲಿ ಸುತ್ತಾಡುವಾಗ ಖುದ್ದು ಜಿಲ್ಲಾಧಿಕಾರಿಗಳೇ ಕಿಟಕಿ ಮೂಲಕ ಮದ್ಯ ಮಾರಾಟವನ್ನು ವೀಕ್ಷಿಸಿದರು. ಅಶ್ವಥ್ಥಕಟ್ಟೆ ಪಕ್ಕದಲ್ಲಿರುವ ಗುಜರಿ ಅಂಗಡಿಯವರು ಅನಧಿಕೃತವಾಗಿ ಹಾಕಿಕೊಂಡಿರುವ ಗೇಟ್ ಬಗ್ಗೆ ರಾಮದಾಸ್ ಮಾಹಿತಿ ನೀಡಿದರು, ಮುಖಂಡರಾದ ಚಿದಾನಂದ, ರಾಮಮೂರ್ತಿ ಪೇಟೆಯಲ್ಲಿ ಅನಧಿಕೃತವಾಗಿ ಕಟ್ಟಿರುವ ಕಟ್ಟಡದ ಕುರಿತು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು. ತಹಸೀಲ್ದಾರ್ ಬಿ.ಎ.ಮೋಹನ್. ಪೌರಾಯುಕ್ತ ಮಂಜುನಾಥ್, ನಗರಸಭೆ ಅಧ್ಯಕ್ಷ ತ.ನ.ಪ್ರಭುದೇವ್, ಉಪಾಧ್ಯಕ್ಷೆ ಜಯಲಕ್ಷ್ಮಿ, ನಗರಸಭಾ ಸದಸ್ಯರಾದ ಎಸ್.ಎ.ಭಾಸ್ಕರ್,ಎಂ.ಶಿವಕುಮಾರ್, ಡಿ.ಎಂ.ಚಂದ್ರಶೇಕರ್, ಮಲ್ಲೇಶ್, ಬಿ.ಕೆ.ಮುದ್ದಪ್ಪ, ಮತ್ತು ಹೇಮಾವತಿಪೇಟೆ ನಾಗರೀಕರು ಹಾಜರಿದ್ದರು.
Comments