HDK ಕೈ ಸೇರಿದೆ “ಆಪರೇಷನ್ ಕಮಲ” ಡಿಟೇಲ್ಸ್..! ಅರಳುವ ಮುನ್ನವೆ ಮುದುಡಿದ ಕಮಲ..!!

ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಬಿಜೆಪಿಯು ಸಾಕಷ್ಟು ಕಸರತ್ತನ್ನು ನಡೆಸುತ್ತಿದೆ, ಇದೀಗ ಆಪರೇಷನ್ ಕಮಲ ವರದಿ ಸಿಎಂ ಕುಮಾರಸ್ವಾಮಿ ಕೈ ತಲುಪಿದೆ. ಮೈತ್ರಿ ಸರ್ಕಾರವನ್ನು ಕೆಡವಲು ಬಿಜೆಪಿ ಪ್ರಯತ್ನ ಮಾಡುತ್ತಿರುವುದು ಸಾಬೀತಾಗಿದೆ. ಈಗಾಗಲೇ 25ಕ್ಕೂ ಹೆಚ್ಚು ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ಬಿಜೆಪಿ ಗಾಳ ಹಾಕಿದ್ದು, ಪ್ರತಿಯೊಬ್ಬ ಶಾಸಕರಿಗೂ 5 ರಿಂದ 50 ಕೋಟಿ ವರೆಗೂ ಆಮಿಷವನ್ನು ಒಡ್ಡಿದ್ದಾರೆ. ಬಿಜೆಪಿಯ 10ಕ್ಕೂ ಹೆಚ್ಚು ನಾಯಕರು ‘ಆಪರೇಷನ್ ಕಮಲ’ ಮಾಡುತ್ತಿರುವುದು ತಿಳಿದುಬಂದಿದೆ.
ಅದರಲ್ಲಿ ಮುಖ್ಯವಾಗಿ ಯಡಿಯೂರಪ್ಪ, ಶ್ರೀರಾಮಲು, ಸಿ.ಪಿ.ಯೋಗೇಶ್ವರ್, ಸತೀಶ್ ರೆಡ್ಡಿ, ಎಸ್.ಆರ್ ವಿಶ್ವನಾಥ್, ಶೋಭಾ ಕರಂದ್ಲಾಜೆ, ಅಶ್ವತ್ಥ್ ನಾರಾಯಣ್, ರೇಣುಕಾಚಾರ್ಯ, ಮುರಗೇಶ್ ನಿರಾಣಿ, ಪ್ರಭಾಕಾರ್ ಕೋರೆ ಬಸವರಾಜ್ ಬೊಮ್ಮಯಿ ಹೆಸರುಗಳು ಕೇಳಿ ಬರುತ್ತಿವೆ.. ಬೆಂಗಳೂರಿನ ಕೆಲ ಹೋಟೆಲ್ ಸೇರಿದಂತೆ ಬೇರೆ ಬೇರೆ ಸ್ಥಳಗಳಲ್ಲಿ ಶಾಸಕರನ್ನು ಬಿಜೆಪಿ ನಾಯಕರು ಸಂಪರ್ಕ ಮಾಡಿದ್ದಾರೆ. ಕೇವಲ ಶಾಸಕರನ್ನಷ್ಟೇ ಅಲ್ಲದೆ ಶಾಸಕರ ಕುಟುಂಬ ಸದಸ್ಯರನ್ನೂ ಕೂಡಬಿಜೆಪಿ ನಾಯಕರು ಭೇಟಿ ಮಾಡಿ ಆಮಿಷ ಒಡ್ಡಿದ್ದಾರಂತೆ.ಆದ್ರೆ ಇದುವರೆಗೂ ಯಾವ ಶಾಸಕರೂ ಕೂಡ ಮುಂಬೈಗೆ ಹೋಗಿಲ್ಲ ಎಂದು ಸಿಎಂಕುಮಾರಸ್ವಾಮಿ ಗೆ ರಾಜ್ಯ ಗುಪ್ತಚರ ಇಲಾಖೆಯು ಮಾಹಿತಿಯನ್ನು ನೀಡಿದೆ ಎಂದು ಹೇಳಲಾಗುತ್ತಿದೆ.
Comments