ಸಿಎಂ ಕುಮಾರಸ್ವಾಮಿ ಆರಂಭಿಸಿದ ಮೊದಲ ವೃತ್ತಿ ಯಾವುದು ಗೊತ್ತಾ..!? ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಕುಮಾರಣ್ಣ
ವಿಶ್ವವಿಖ್ಯಾತ ನಾಡಹಬ್ಬದಸರಾಹಬ್ಬ ಹಬಳ ವಿಬೃಂಭಣೆಯಿಂದ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಚಲನಚಿತ್ರೋತ್ಸವಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಈ ವೇಳೆ ತಾವು, ವಿತರಕರಾಗಿ, ಪ್ರದರ್ಶಕರಾಗಿ ಹಾಗೂ ನಿರ್ಮಾಪಕರಾದ ತಮ್ಮ ಜೀವನದ ಹಳೆಯ ಘಟನೆಗಳನ್ನು ಸಿಎಂ ಕುಮಾರಸ್ವಾಮಿ ನೆನಪಿಸಿಕೊಂಡರು..
ನಾನು ಕೂಡ ಅರಮನೆ ನಗರಿ ಮೈಸೂರಿಗೆ ಸಿನಿಮಾ ಹಂಚಿಕೆಗಾಗಿ ಬಂದೆ, ಆದರೆ ಯಾವತ್ತೂ ನಾನು ಹಿಂತಿರುಗಿ ನೋಡಲೇ ಇಲ್ಲ. ನಜರಾಬಾದ್ ಮಾದ್ವೇಶ ಕಾಂಪ್ಲೆಕ್ಸ್ ನಲ್ಲಿ ಚೆನ್ನಾಂಬಿಕಾ ಫಿಲ್ಮ್ ಆರಂಭಿಸಿ ಸಿನಿಮಾ ಹಂಚಿಕೆಯನನ್ನು ಪ್ರಾರಂಭಿಸಿದೆ. ನಾನು ಹಂಚಿಕೆ ಮಾಡಿದ ಮೊದಲು ಮೂರು ಚಿತ್ರಗಲ್ಲಿ ಅಂಬರೀಷ್ ನಟಿಸಿದ್ದರು, ನಾನು ಮೈಸೂರು, ಮಂಡ್ಯ, ಕೊಡಗು ಮತ್ತು ಹಾಸನ ಜಿಲ್ಲೆಗಳಿಗೆ ಮಾತ್ರ ಹಂಚಿಕೆದಾರನಾಗಿದ್ದೆ, ನನ್ನ ಸಂಪಾದನೆ ಆರಂಭವಾದದ್ದು ಮೈಸೂರಿನಿಂದ ಎಂದು ಸಿಎಂ ಹೇಳುತ್ತಾ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡರು..
Comments