ಬಿಗ್ ಬ್ರೇಕಿಂಗ್: ಮೊಮ್ಮಕ್ಕಳ ರಾಜಕೀಯದ ಬಗ್ಗೆ ಸ್ಪಷ್ಟನೆ ನೀಡಿದ ದೇವೆಗೌಡರು..! ನಿಖಿಲ್, ಪ್ರಜ್ವಲ್ ರಾಜಕೀಯಕ್ಕೆ ಬರ್ತಾರ..? ಬರಲ್ವ..?

ಇಂದು ಮಾಜಿ ಪ್ರಧಾನಿ ಹೆಚ್ ಡಿ ದೇವೆಗೌಡರು ವಿಜಯಪುರ ಜಿಲ್ಲೆಗೆ ಭೇಟಿಯನ್ನು ನೀಡಿದರು. ಇಂಡಿ ತಾಲೂಕಿನ ತಾಂಬಾ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಡದೇವಿ ಉತ್ಸವಕ್ಕೆ ಮಾಜಿ ಪ್ರಧಾನಿ ಹೆಚ್ ಡಿ ದೇವೆಗೌಡರು ಚಾಲನೆಯನ್ನು ನೀಡಿದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಪ್ರಧಾನಿ ದೇವೆಗೌಡರು ಮುಂದಿನ ಲೋಕಸಭಾ ಉಪ ಚುನಾವಣೆಯಲ್ಲಿ ಶಿವಮೊಗ್ಗದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಯಾಗಿ ಮಧು ಬಂಗಾರಪ್ಪರನ್ನ ಕಣಕ್ಕಿಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ನಿನ್ನೆ ನಡೆದ ಉಭಯ ಪಕ್ಷಗಳ ಸಭೆಯಲ್ಲಿ ಈ ನಿರ್ಧಾರವನ್ನು ಕೈ ತೆಗೆದುಕೊಳ್ಳಲಾಗಿದೆ. ಸಧ್ಯ ಮಧು ಬಂಗಾರಪ್ಪ ವಿದೇಶ ಪ್ರವಾಸದಲ್ಲಿದ್ದು, ಆಗಮಿಸಿದ ತಕ್ಷಣ ಅವರ ಜೊತೆ ಚರ್ಚೆ ಮಾಡಲಾಗುವುದು ಎಂದರು. ಅವರು ಸ್ಪರ್ಧಿಸಲು ಹಿಂದೇಟು ಹಾಕಿದಲ್ಲಿ ಸ್ಥಾನವನ್ನ ಕಾಂಗ್ರೆಸ್ ಗೆ ಬಿಟ್ಟುಕೊಡಲಾಗುವುದು ಎಂದು ತಿಳಿಸಿದ್ದಾರೆ. ಮಂಡ್ಯ-ರಾಮನಗರದಿಂದ ಸ್ಪರ್ಧಿಗಳನ್ನ ಕಣಕ್ಕಿಳಿಸುವ ವಿಚಾರವಾಗಿ ಮಾತನಾಡಿದ ದೇವೆಗೌಡರು, ಮಂಡ್ಯದಿಂದ ಮೊಮ್ಮಕ್ಕಳನ್ನ ಸ್ಪರ್ಧೆಗೆ ಯಾವುದೇ ಕಾರಣಕ್ಕೂ ಇಳಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
Comments