ಪೊಲೀಸ್ ಠಾಣೆ ಎದುರೇ ಗಂಡನ ಚೆಂಡಾಡಿದ ರಣಚಂಡಿ ಹೆಂಡತಿ, ಆಸ್ತಿ ವಿಚಾರಕ್ಕೆ ಪತ್ನಿಯಿಂದಲೆ ಗಂಡನ ಮೇಲೆ ಹಲ್ಲೆ.
ಆಸ್ತಿ ವಿಚಾರಕ್ಕೆ ಪತ್ನಿಯಿಂದಲೇ ಗಂಡನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ದೊಡ್ಡಬಳ್ಳಾಪುರ ನಗರದ ಗ್ರಾಮಾಂತರ ಪೊಲೀಸ್ ಠಾಣೆ ಆವರಣದಲ್ಲಿ ನಡೆದಿದೆ. ನಗರದ ನಿವಾಸಿ ರಾಮಾಂಜಿನಪ್ಪ (೪೩) ಹಲ್ಲೆಗೊಳಗಾದ ಪತಿ. ಹಲ್ಲೆಗೊಳಗಾದ ರಾಮಾಂಜೀನಪ್ಪ ನಾಗೇನಹಳ್ಳಿ ನಿವಾಸಿ ನರಸಮ್ಮ ಎಂಬುವವರನ್ನ ೧೪ ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಇಬ್ಬರೂ ವೈಮನಸ್ಸಿನಿಂದ ನಾಲ್ಕು ವರ್ಷಗಳಿಂದ ದೂರವಾಗಿದ್ದರೂ ಆಸ್ತಿ ವಿಚಾರವಾಗಿ ಇಬ್ಬರ ನಡುವೆ ಪಂಚಾಯ್ತಿ ನಡೆಯುತ್ತಿತ್ತು. ನೆನ್ನೆಯಷ್ಟೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನ್ಯಾಯ ಪಂಚಾಯ್ತಿ ಮಾಡಲು ಗಂಡ ಹೆಂಡತಿಯನ್ನ ಕರೆಸಿದ್ದರು. ಈ ವೇಳೆ ರಣಚಂಡಿ ಅವತಾರವನ್ನ ತಾಳಿರುವ ಪತ್ನಿ ನರಸಮ್ಮ ಹಾಗೂ ಆಕೆಯ ಸಹೋದರರಾದ ಸುಬ್ರಹ್ಮಣ್ಯ, ಸಿದ್ದರಾಜು ಗಂಡ ರಾಮಾಂಜೀನಪ್ಪ ಹಾಗೂ ತಾಯಿ ಅಂಭುಜಮ್ಮ ಮೇಲೆ ಪಂಚಾಯ್ತಿಗೆ ಮುನ್ನವೇ ಪೊಲೀಸ್ ಠಾಣೆ ಆವರಣದಲ್ಲಿಯೇ ಮಾರಣಾಂತಿಕವಾಗಿ ಕಲ್ಲಿನಿಂದ ಹಲ್ಲೆಯನ್ನ ನಡೆಸಿದ್ದಾರೆ. ಹಲ್ಲೆಗೊಳಗಾಗಿರುವ ರಾಮಾಂಜಿನಪ್ಪ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಪಡೆಯುತ್ತಿದ್ದಾರೆ. ಹಲ್ಲೆ ಮಾಡಿದ ನರಸಮ್ಮನನ್ನ ಬಂಧಿಸಿದ್ದ ಗ್ರಾಮಾಂತರ ಪೊಲೀಸರು ರಾತ್ರಿಯೇ ಎಪ್ಐಆರ್ ಮಾಡಿ ಸ್ಟೆಷನ್ ಬೇಲ್ ನೀಡಿ ಬಿಟ್ಟುಕಳಿಸಿದ್ದಾರೆ. ಇದರಿಂದಾಗಿ ಹಲ್ಲೆಗೊಳಗಾದ ಕುಟುಂಬಸ್ಥರು ಪೊಲೀಸರ ಕ್ರಮದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Comments