ನವೆಂಬರ್ 4/5 ರಂದು ತಾಲ್ಲೂಕು ಮಟ್ಟದ ಗಿಲ್ಲಿದಾಂಡು ಕ್ರೀಡಾ ಕೂಟ





ನವೆಂಬರ್ 4 ನೇ ಭಾನುವಾರ ಹಾಗೂ 5 ನೇ ಸೋಮವಾರದಂದು ದೇಸೀ ಕ್ರೀಡೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತಾಲ್ಲೂಕು ಮಟ್ಟದ ಗಿಲ್ಲಿದಾಂಡು ಕ್ರೀಡಾಕೂಟವನ್ನು ನಗರದ ವಿವೇಕಾನಂದ ನಗರದಲ್ಲಿರುವ ವಿನಾಯಕ ಗೆಳೆಯರ ಬಳಗ ಹಾಗೂ ದೊಡ್ಡಬಳ್ಳಾಪುರ ನಗರದ ಎಲ್ಲಾ ಕ್ರಿಕೆಟ್ ಮತ್ತು ಕ್ರೀಡಾ ಪ್ರೇಮಿಗಳ ಸಹಕಾರದೊಂದಿಗೆ ಆಯೋಜಿಸಲಾಗಿದೆ. ಈ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ತಂಡಗಳು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಲು ಕೋರಲಾಗಿದೆ. ಪ್ರವೇಶ ಶುಲ್ಕ ಪ್ರತೀ ತಂಡಕ್ಕೆ ರೂ. 3೦೦/- ಮಾತ್ರ. ತಂಡದಲ್ಲಿ 5 ಆಟಗಾರರು ಆಡತಕ್ಕದ್ದು, ಆಟಗಾರರು ತರುವ ದಾಂಡು 12 ಇಂಚು ಇರತಕ್ಕದ್ದು.
Comments