ಚುನಾವಣೆಗೂ ಮುನ್ನವೇ ಬಿಜೆಪಿ ಗೆ ಮುಖಭಂಗ..! ಸಿಎಂ ಎಚ್'ಡಿಕೆ ರವರ ನಡೆಗೆ ಎದುರಿ ಕಣದಿಂದ ಹಿಂದೆ ಸರಿದ ಈ ಬಿಜೆಪಿ ನಾಯಕ..!

ಈಗಾಗಲೇ ಎಲ್ಲಾ ಪಕ್ಷಗಳು ಕೂಡ ಉಪ ಚುನಾವಣೆ ಸಿದ್ದತೆಯನ್ನು ಮಾಡಿಕೊಳ್ಳುತ್ತಿವೆ..ಆದರೆ ರಾಮನಗರದಿಂದ ಕಣಕ್ಕೆ ಇಳಿಯಲು ಬಿಜೆಪಿಯ ಈ ಅಭ್ಯರ್ಥಿ ಹಿಂದೇಟು ಹಾಕುತ್ತಿದ್ದಾರೆ. ರಾಮನಗರದ ಜಿದ್ದಾಜಿದ್ದಿಗೆ ಮಾಜಿ ಸಚಿವ ಸಿಪಿ ಯೋಗೇಶ್ವರ್ ಸುತಾರಾಂ ಒಪ್ಪುತ್ತಿಲ್ಲ.. ಹಾಗಾಗಿ ಆ ಜಾಗಕ್ಕೆ ರುದ್ರೆಶ್ ಅವರನ್ನು ನಿಲ್ಲಿಸಲು ಬಿಎಸ್ ವೈ ಯೋಚಿಸುತ್ತಿದ್ದಾರೆ. ವಿಜಯೇಂದ್ರ ಒಪ್ಪಿಗೆ ಕೊಟ್ಟರೆ ಮಾತ್ರ ನಾನು ಅಖಾಡಕ್ಕೆ ಇಳಿಯುತ್ತೇನೆ ಎಂದು ರುದ್ರೇಶ್ ಹೇಳುತ್ತಿದ್ದಾರೆ.
ಆದರೆ ಹೆಚ್ ಡಿಕೆ ಯ ರಣರಂತ್ರಕ್ಕೆ ಎದುರಿ ಬಿಜೆಪಿ ನಾಯಕರು ಹಿಂದೆ ಸರಿಯುತ್ತಿದ್ದಾರೆ.ಜೆಡಿಎಸ್ ನಾಯಕನ ಮುಂದೆ ಚುನಾವಣೆಯಲ್ಲಿ ನಿಂತುಕೊಂಡರೆ ಸೋಲುವ ಭಯ ಈಗಾಗಲೇ ಮಾಜಿ ಸಚಿವ ಸಿಪಿ ಯೋಗೇಶ್ವರ ಅವರಿಗೆ ಕಾಡುತ್ತಿದೆ. ಹಾಗಾಗಿ ರಾಮನಗರದಿಂದ ನಾಣು ಸ್ಪರ್ಧಿಸುವುದಿಲ್ಲ.. ನಾನು ಚನ್ನಪಟ್ಟಣದಿಂದಲೇ ಸ್ಪರ್ಧಿಸುತ್ತೇನೆ ಎಂದಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಸಿಎಂ ಕುಮಾರಸ್ವಾಮಿಯವರ ರಣತಂತ್ರ ಮಾಜಿ ಸಚಿವರಾದ ಸಿಪಿ ಯೋಗೇಶ್ವರ್ ಮೇಲೆ ಸಖತ್ತಾಗಿಯೇ ಬೀರಿದೆ ಎನ್ನಬಹುದು..
Comments