ಬೆಂಗಳೂರಿನ ಬಗ್ಗೆ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದ್ದೇನು ಗೊತ್ತಾ..?

ದೋಸ್ತಿ ಸರ್ಕಾರದಿಂದ ಮುಖ್ಯಮಂತ್ರಿಯಾಗಿ ಹೊರ ಬಂದ ಕುಮಾರಸ್ವಾಮಿಯವರು ಬೆಂಗಳೂರಿನ ಬಗ್ಗೆ ಸಾಕಷ್ಟು ಕನಸುಗಳನ್ನು ಇಟ್ಟುಕೊಂಡಿದ್ದಾರೆ. ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಹಿಳೆಯರು ಸುರಕ್ಷಿತವಾಗಿ ಹಾಗೂ ಸಮಾಜ ಶಾಂತಿಯುತವಾಗಿದ್ದು ಮುಂದಿನ ದಿನಗಳಲ್ಲಿ ರಾಮರಾಜ್ಯವಾಗಲಿದೆ ಎಂದು ಸಿಎಂ ಕುಮಾರ ಸ್ವಾಮಿಯವರು ಭರವಸೆಯನ್ನು ನೀಡಿದ್ದಾರೆ..
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಗಾಂಧಿಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರ ಸ್ವಾಮಿಯವರು , ನಗರದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಅನುಮತಿಯಿಲ್ಲದೆ ಜೂಜಾಟ ನಡೆಸುವುದು ಸೇರಿದಂತೆ ಹಲವು ಸಮಾಜ ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ , ಖಾಸಗಿ ಹಾಗೂ ಸರ್ಕಾರಿ ಭೂಮಿಗಳ ಒತ್ತುವರಿ ಸಾಮಾನ್ಯವಾಗಿ ಹೋಗಿದೆ, ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ಹಿರಿಯ ನಾಗರಿಕರನ್ನು ವಂಚಿಸಲಾಗುತ್ತಿದೆ,. ಸರಗಳ್ಳತನ ಮಿತಿಮೀರಿದೆ ಇದಕ್ಕೆಲ್ಲಾ ಕಡಿವಾಣ ಹಾಕುತ್ತೇವೆ ಎಂದಿದ್ದಾರೆ.
Comments