ದೇವೇಗೌಡರ ಕುಟುಂಬದಿಂದ ಲೋಕಸಭೆ ಚುನಾವಣೆಗೆ ಮೂವರು ಸ್ಪರ್ಧೆ..!? ಯಾರ್ಯಾರು ಯಾವ್ಯಾವ ಕ್ಷೇತ್ರ ಗೊತ್ತಾ..?

ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ…ಯಾವುದೇ ಲೋಕಸಭಾ ಚುನಾವಣೆಗೆ ಎಲ್ಲಾ ರೀತಿಯ ತಯಾರಿಗಳನ್ನು ಎಲ್ಲಾ ಪಾರ್ಟಿಗಳಲ್ಲಿ ನಡೆಸುತ್ತಿದ್ದಾರೆ. ಸದ್ಯ ಈಗ ಲೋಕಸಭಾ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಯಾರು ಅನ್ನೋ ಗೊಂದಲಕ್ಕೆ ತೆರೆ ಎಳೆದಿದೆ..
ದೇವೇಗೌಡರ ಕುಟುಂಬದಿಂದ ಮೂವರು ಸ್ಪರ್ಧೆ ಮಾಡುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.. ಎಚ್.ಡಿ.ದೇವೇಗೌಡ, ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ ಅವರು 2019ರ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ. ಎಚ್.ಡಿ.ದೇವೇಗೌಡ ಅವರು ಹಾಸನದಿಂದ, ಪ್ರಜ್ವಲ್ ರೇವಣ್ಣ ಅವರು ಮೈಸೂರು-ಕೊಡಗು ಕ್ಷೇತ್ರದಿಂದ, ನಿಖಿಲ್ ಕುಮಾರಸ್ವಾಮಿ ಮಂಡ್ಯದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ ಎಂಬುದು ಸದ್ಯದ ಮಾಹಿತಿ ತಿಳಿದುಬಂದಿದೆ.
Comments