ಕರ್ನಾಟಕ ನೇಕಾರರ ರಕ್ಷಣಾ ವೇದಿಕೆ ವತಿಯಿಂದ ಕೇಂದ್ರ ರೇಷ್ಮೆ ಮಂಡಲಿ ಅಧ್ಯಕ್ಷರಿಗೆ ಸನ್ಮಾನ
ದಿನಾಂಕ 2-10-2018 ರ ಮಂಗಳವಾರದಂದು ಕರ್ನಾಟಕ ನೇಕಾರರ ರಕ್ಷಣಾ ವೇದಿಕೆ ವತಿಯಿಂದ ಕೇಂದ್ರ ರೇಷ್ಮೆ ಮಂಡಲಿ ಅಧ್ಯಕ್ಷ ಕೆ.ಎಂ. ಹನುಮಂತರಾಯಪ್ಪನವರಿಗೆ ಸನ್ಮಾನ ಮಾಡಲಾಯಿತು. ನಂತರ ನಡೆದ ಮಾತುಕತೆಯಲ್ಲಿ ನೇಕಾರರಿಗೆ ಕೇಂದ್ರ ಸರ್ಕಾರದಿಂದ ಬರತಕ್ಕಂತಹ ಅನುದಾನದ ಬಗ್ಗೆ ಮತ್ತು ಸೂಕ್ತವಾದ ಮಾರ್ಗದಲ್ಲಿ ನೇಕಾರರಿಗೆ ಅನುದಾನ ತಲುಪುವ ಕುರಿತು ಚರ್ಚಿಸಲಾಯಿತು, ಕರ್ನಾಟಕ ನೇಕಾರರ ರಕ್ಷಣಾ ವೇದಿಕೆಯ ರಾಜ್ಯ ಘಟಕದ ಒಬ್ಬರಿಗೆ ಪಕ್ಷಾತೀತವಾಗಿ ಕೇಂದ್ರ ರೇಷ್ಮೆ ಮಂಡಲಿಯಲ್ಲಿ ನಿರ್ದೇಶಕ ಹುದ್ದೆಯನ್ನು ನೀಡುವಂತೆ ಮನವಿ ಸಲ್ಲಿಸಲಾಯಿತು. ನಂತರ ಮಾತನಾಡಿದ ಹನುಮಂತರಾಯಪ್ಪ ಕರ್ನಾಟಕ ನೇಕಾರರ ರಕ್ಷಣಾ ವೇದಿಕೆಗೆ ಸಹಕಾರವನ್ನು ನೀಡುತ್ತೇವೆ ಹಾಗೂ ನೇಕಾರರ ಏಳಿಗೆಗೆ ನಾವೂ ನಿಮ್ಮೊಂದಿಗೆ ಕೈಜೋಡಿಸುತ್ತೇವೆ, ನಿಮ್ಮ ಮನವಿಯನ್ನು ರಾಜ್ಯದ ಬಿಜೆಪಿ ನಾಯಕರು ಹಾಗೂ ಪ್ರಮುಖರಿಗೆ ತಿಳಿಸುವ ಮೂಲಕ ಮಾತನಾಡುತ್ತೇನೆ ಎಂದು ಭರವಸೆಯನ್ನು ನೀಡಿ, ನಿಮ್ಮ ಸಂಘಟನೆ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸಿದರು.
ದೊಡ್ಡಬಳ್ಳಾಪುರ ಘಟಕದ ಅಧ್ಯಕ್ಷ ಕೃಷ್ಣಕುಮಾರ್, ಉಪಾಧ್ಯಕ್ಷ ನಾಗರಾಜ್, ಕಾರ್ಯಾಧ್ಯಕ್ಷ ಕುಮಾರ್, ಮಹಿಳಾ ಘಟಕದ ಕಾರ್ಯದರ್ಶಿ ವತ್ಸಲಾ, ಸಂಘಟನ ಕಾರ್ಯದರ್ಶಿ ಗಾಯತ್ರಿ, ರಾಜ್ಯ ಘಟಕದ ನರಸಿಂಹಮೂರ್ತಿ, ಶ್ರೀನಿವಾಸ್, ಕರ್ನಾಟಕ ನೇಕಾರರ ರಕ್ಷಣಾ ವೇದಿಕೆ ರಾಜ್ಯ ಘಟಕದ ಪದಾಧಿಕಾರಿಗಳು ಮತ್ತು ಇನ್ನಿತರ ಪದಾಧಿಕಾರಿಗಳು ಭಾಗವಹಿಸಿದ್ದರು.
Comments