ಸುಚೇತನಾ ತಂಡದಿಂದ ಬಾಪೂಜಿ ಕನಸಿನ ಸ್ವಚ್ಛ ಭಾರತ ನಿರ್ಮಾಣಕ್ಕೆ ಅಳಿಲು ಸೇವೆ
ನಗರದ ಸುಚೇತನಾ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್ ವತಿಯಿಂದ ಇಂದು ಗಾಂಧಿ ಜಯಂತಿ ಅಂಗವಾಗಿ ಮಹಾತ್ಮನ ಸ್ವಚ್ಛ ಭಾರತದ ಕನಸನ್ನು ನನಸು ಮಾಡಲು, ನಗರದ ಗಾಂಧಿ ನಗರದಲ್ಲಿರುವ ಇತಿಹಾಸ ಪ್ರಸಿದ್ದ ಆದಿನಾರಾಯಣ ದೇಗುಲ ಮತ್ತು ಆವರಣವನ್ನು ಸ್ವಚ್ಛ ಮಾಡುವುದರ ಮೂಲಕ ತಮ್ಮ ಅಳಿಲು ಸೇವೆ ಸಲ್ಲಿಸಿದರು. ಈ ಕಾರ್ಯದಲ್ಲಿ ನಗರ ಸಭೆ ಅಧ್ಯಕ್ಷ ತ.ನ.ಪ್ರಭುದೇವ್ ಕೂಡಾ ಪಾಲ್ಗೊಂಡು ಸ್ವಚ್ಛಗೊಳಿಸಲು ಸಹಕರಿಸಿದರು. ಸುಚೇತನಾ ಟ್ರಸ್ಟ್ ನ ಎಲ್ಲ ಪದಾಧಿಕಾರಿಗಳು ಬೆಳಿಗ್ಗೆ 5-30 ರಿಂದಲೇ ಪಾಲ್ಗೊಂಡು ದೇಗುಲ ಮತ್ತು ಆವರಣವನ್ನು ಸ್ವಚ್ಛಗೊಳಿಸಿದರು.
Comments