ಪೌರ ಕಾರ್ಮಿಕರಿಗೆ ಅಭಿನಂದನೆ ಮೋದಿ ಭಾರತ್ ವತಿಯಿಂದ






ದಿನಾಂಕ 2-10-2018 ಮಂಗಳವಾರ ಬೆಳಿಗ್ಗೆ 11 ಘಂಟೆಗೆ ಗಾಂಧಿ ಜಯಂತಿ ಪ್ರಯುಕ್ತ ಕನ್ನಡ ಜಾಗೃತ ಭವನದಲ್ಲಿ ಪ್ರಧಾನ ಮಂತ್ರಿ ಸನ್ಮಾನ್ಯ ನರೇಂದ್ರ ಮೋದಿ ಯವರ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ನಮ್ಮ ನಗರವನ್ನು ಸ್ವಚ್ಛವಾಗಿಡಲು ಪ್ರತಿದಿನ ಶ್ರಮಿಸುತ್ತಿರುವ ನೂರ ಅರವತ್ತು ಮಂದಿ ಪೌರ ಕಾರ್ಮಿಕರಿಗೆ ಅಭಿನಂದನಾ ಸಮಾರಂಭವನ್ನು ಮೋದಿ ಭಾರತ್ ಸಂಘಟನೆ ವತಿಯಿಂದ ಆಯೋಜಿಸಲಾಗಿತ್ತು. ಮುಖ್ಯ ಅಥಿತಿಗಳಾಗಿ ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಕೆ.ರಮೇಶ್, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ತಿಪ್ಪಣ್ಣ, ಮೋದಿ ಭಾರತ್ ಸಂಘಟನೆಯ ರೂವಾರಿ ವಕೀಲ ರವಿ ಮಾವಿನಕುಂಟೆ ಯವರೊಂದಿಗೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭೆ ಅಧ್ಯಕ್ಷ ತ.ನ.ಪ್ರಭುದೇವ್ ವಹಿಸಿದ್ದರು. ನಗರಸಭೆಯಲ್ಲಿ ಕಾರ್ಯನಿರತರಾಗಿರುವ ಸುಮಾರು ನೂರ ಅರವತ್ತು ಮಂದಿ ಪೌರ ಕಾರ್ಮಿಕರಿಗೆ ಗೌರವ ಸಲ್ಲಿಸಲಾಯಿತು.
ಎಸ್.ಎಂ.ಗೊಲ್ಲಹಳ್ಳಿ ಬಸವರಾಜ್, ಗಿರೀಶ್ ರಾಜಘಟ್ಟ, ಸೊಣ್ಣಪನಹಳ್ಳಿ ರಮೇಶ್, ಸೊಣ್ಣಪನಹಳ್ಳಿ ಹನುಮಪ್ಪ, ತಿಪ್ಪಾಪುರ ಮುನಿಚಂದ್ರ, ಸುಣ್ಣಘಟ್ಟ ಬಸವರಾಜು, ಮದುರನಹೊಸಳ್ಳಿ ತ್ಯಾಗರಾಜು, ಸುನಿಲ್, ಶಿವಕುಮಾರ್, ಹಮಾಮ್ ನವೀನ್ ಮತ್ತು ಸೀನಪ್ಪ, ಕೊನಘಟ್ಟ ಅಂಬರೀಶ್, ಶಂಭು ಮತ್ತು ಮಿತ್ರರು ಬಾಷೆಟ್ಟಿಹಳ್ಳಿ, ಎಲ್.ಐ.ಸಿ.ಸೋಮು, ಮೋದಿ ಅಭಿಮಾನಿಗಳು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.
Comments