ಮೋದಿ ಭಾರತ್ ವತಿಯಿಂದ ಪೌರ ಕಾರ್ಮಿಕರಿಗೆ ಅಭಿನಂದನಾ ಸಮಾರಂಭ
ದಿನಾಂಕ 2-10-2018 ಮಂಗಳವಾರ ಬೆಳಿಗ್ಗೆ 11 ಘಂಟೆಗೆ ಗಾಂಧಿ ಜಯಂತಿ ಪ್ರಯುಕ್ತ ಕನ್ನಡ ಜಾಗೃತ ಭವನದಲ್ಲಿ ಪ್ರಧಾನ ಮಂತ್ರಿ ಸನ್ಮಾನ್ಯ ನರೇಂದ್ರಮೋದಿ ಯವರ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ನಮ್ಮ ನಗರವನ್ನು ಸ್ವಚ್ಛವಾಗಿಡಲು ಪ್ರತಿದಿನ ಶ್ರಮಿಸುತ್ತಿರುವ ನೂರ ನಲವತ್ತು ಮಂದಿ ಪೌರ ಕಾರ್ಮಿಕರಿಗೆ ಅಭಿನಂದನಾ ಸಮಾರಂಭವನ್ನು ಮೋದಿ ಭಾರತ್ ಸಂಘಟನೆ ವತಿಯಿಂದ ಆಯೋಜಿಸಲಾಗಿದೆ. ಮುಖ್ಯ ಅಥಿತಿಯಾಗಿ ನಗರಸಭೆ ಅಧ್ಯಕ್ಷ ತ.ನ.ಪ್ರಭುದೇವ್ ಆಗಮಿಸಲಿದ್ದಾರೆ, ಮೋದಿ ಭಾರತ್ ಸಂಘಟನೆಯ ಹಿತೈಷಿ ವಕೀಲ ರವಿ ಮಾವಿನಕುಂಟೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೋದಿ ಅಭಿಮಾನಿಗಳು ಮತ್ತು ಸಾರ್ವಜನಿಕರಿಗೆ ಆಯೋಜಕರು ವಿನಂತಿಸಿದ್ದಾರೆ.
Comments