ರಾಜ್ಯ ಸರ್ಕಾರದಿಂದ ರೈತರಿಗೆ ಮತ್ತೊಂದು ಗುಡ್ ನ್ಯೂಸ್..! ನಿಧನ ಹೊಂದಿರುವ ರೈತರ ಸಾಲ ಕೂಡ ಮನ್ನಾ..!
ಜೆಡಿಎಸ್-ಕಾಂಗ್ರೆಸ ಮೈತ್ರಿ ಕೂಟ ಸರ್ಕಾರ ಬಜೆಟ್ ನಲ್ಲಿ ಘೋಷಣೆ ಮಾಡಿರುವ ರೈತರ ಸಾಲ ಮನ್ನಾ ಕುರಿತಂತೆ ಮಾನ್ಯ ಸಹಕಾರ ಸಚಿವರಾದ ಬಂಡೆಪ್ಪ ಖಾಶೆಂಪುರ ಅವರು 2018-19ನೇ ಸಾಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಬೆಳೆ ಸಾಲ ಪಡೆದು ನಿಧನ ಹೊಂದಿದ ರೈತರಿಗೆ ರೂ. 1 ಲಕ್ಷಗಳ ಸಾಲವನ್ನು ಮನ್ನಾ ಮಾಡುವ ಬಗ್ಗೆ ಚರ್ಚೆ ನಡೆಸಿದೆ.
ಇಂದು ರಾಜ್ಯದ ಎಲ್ಲಾ ಜಿಲ್ಲೆಗಳ ಡಿ.ಸಿ.ಸಿ ಬ್ಯಾಂಕ್ ಗಳ ಅಧ್ಯಕ್ಷರು, ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ರಾದ ಕೆ.ಎನ್.ರಾಜಣ್ಣ, ಸಹಕಾರ ಇಲಾಖೆ ನಿಬಂಧಕರು ಹಾಗೂ ಹಿರಿಯ ಅಧಿಕಾರಿಗಳೂಂದಿಗೆ ವಿಕಾಸ ಸೌಧದ 3ನೇ ಮಹಡಿಯಲ್ಲಿ ರೂಮ್ ನಂ. 318 ರಲ್ಲಿ ಸುರ್ಧಿಘ ಚರ್ಚೆ ನಡೆಸಿದ್ದು, ಈ ಬಗ್ಗೆ ಸದ್ಯದಲ್ಲೆ ಒಂದು ನಿರ್ಧಾರಕ್ಕೆ ಬರಲಿದ್ದಾರೆ ಎನ್ನಲಾಗಿದೆ.
Comments