ಬಿಬಿಎಂಪಿಯ ನೂತನ ಮೇಯರ್, ಉಪಮೇಯರ್ ಗೆ ಅಭಿನಂದಿಸಿದ ಸಿಎಂ ಎಚ್’ಡಿಕೆ...ಆಪರೇಷನ್ ಕಾರ್ಪೋರೇಟರ್ಸ್ ನಲ್ಲೂ ಬಿಜೆಪಿ ಫೈಲ್ಯೂರ್..!

28 Sep 2018 3:33 PM |
3088 Report

ಬಿಬಿಎಂಪಿಯ ನೂತನ ಮೇಯರ್ ಹಾಗೂ ಉಪಮೇಯರ್ ಆಗಿ ಆಯ್ಕೆಯಾದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಗಂಗಾಬಿಕೆ ಹಾಗೂ ಆರ್. ರಮೀಳಾ ಉಮಾಶಂಕರ್ ಅವರಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಭಿನಂದಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಎಚ್.ಡಿ ಕುಮಾರಸ್ವಾಮಿ, ಇದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟಕ್ಕೆ ಸಿಕ್ಕ ಗೆಲುವು. ಈ ಗೆಲುವಿನಿಂದಾಗಿ ಮೈತ್ರಿ ಸರ್ಕಾರದ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ. ಇದನ್ನು ಯಶಸ್ವಿಯಾಗಿ ನಿರ್ವಹಿಸುತ್ತೇವೆ ಎಂದು ಭರವಸೆ ನನಗಿದೆ ಎಂದು ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

Edited By

Shruthi G

Reported By

hdk fans

Comments