ಬಿಬಿಎಂಪಿಯ ಮೇಯರ್- ಉಪ ಮೇಯರ್ ಪಟ್ಟ ‘ಕೈ’ – ‘ದಳ’ಕ್ಕೆ ಫಿಕ್ಸ್..! ಯಾರಿಗೆ ಯಾವ ಸ್ಥಾನ ಗೊತ್ತಾ? ಫ್ಲಾಪ್ ಆದ 'ಕಮಲ'ದ ಪ್ಲಾನ್..!

ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮೇಯರ್ ಸ್ಥಾನ ಹಾಗೂ ಜೆಡಿಎಸ್ ಗೆ ಉಪ ಮೇಯರ್ ಸ್ಥಾನ ಖಚಿತವಾಗಲಿದೆ ಎಂದು ಶಾಸಕ ಎಸ್.ಟಿ. ಸೋಮಶೇಖರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್, ಬಿಜೆಪಿ ನಾಯಕರುಗಳು ನಮ್ಮ ಕೆಲ ಕಾರ್ಪೋರೇಟರ್ ಗಳನ್ನು ಹೈಜಾಕ್ ಮಾಡಿದ್ದರು. ಅವರಿಗೆ ಹಲವು ಆಮಿಷಗಳನ್ನು ಒಡ್ಡಿ ಬಿಜೆಪಿಗೆ ಮತ ಹಾಕಿಸಿಕೊಳ್ಳಲು ಯತ್ನ ನಡೆಸಿದ್ದರು. ಐದು ಕಾರ್ಪೋರೇಟರ್ ಗಳನ್ನು ಹೈಜಾಕ್ ಮಾಡಿ ಬಿಡದಿ ಬಳಿಯ ರೆಸಾರ್ಟ್ ನಲ್ಲಿಟ್ಟಿದ್ದರು. ಸಧ್ಯ ನಾವು ಈಗ ಎಲ್ಲಾ ಐದು ಕಾರ್ಪೋರೇಟರ್ ಗಳನ್ನು ಕರೆದುಕೊಂಡು ಬಂದಿದ್ದೇವೆ. ಅವರಿಗೆ ಯಾವುದೇ ತೊಂದರೆಯಾಗದಂತೆ ನಾವು ಮೂರು ಜನ ಶಾಸಕರು ಜತೆಯಲ್ಲಿದ್ದೇವೆ. ನಮ್ಮ ಜತೆ ಇರುವ ಐದು ಕಾರ್ಪೋರೇಟರ್ ಗಳಲ್ಲಿ ಯಾವುದೇ ಗೊಂದಲಗಳೂ ಇಲ್ಲ ಎಂದರು. ಇನ್ನು ಐದು ಕಾರ್ಪೋರೇಟರ್ ಜತೆಗೆ ನೇರವಾಗಿ ಚುನಾವಣೆಯಲ್ಲಿ ಪಾಲ್ಗೊಳ್ಳಲು ಹೊರಟಿದ್ದೇವೆ. ಯಾವುದೇ ರೀತಿಯ ತೊಂದರೆಗಳೂ ಇಲ್ಲ. ಹೈಕಮಾಂಡ್ ಸೂಚಿಸಿದಂತೆ ನಡೆದುಕೊಳ್ಳುತ್ತೇವೆ. ಬ್ಲಾಕ್ ಮೇಲ್ ಮಾಡುವವರಿಗೆ ಕೇರ್ ಮಾಡಲ್ಲ. ಕಾಂಗ್ರೆಸ್ ನಿಂದ ಮೇಯರ್, ಜೆಡಿಎಸ್ ನಿಂದ ಉಪಮೇಯರ್ ಆಯ್ಕೆ ಖಚಿತ ಇದರಲ್ಲಿ ಯಾವುದೇ ಸಂಶಯವೂ ಇಲ್ಲ ಎಂದು ತಿಳಿಸಿದರು.
Comments