ಲೋಕಸಭಾ ಚುನಾವಣೆ : ಮೋದಿಗೆ ಸೆಡ್ಡು ಹೊಡೆಯಲು ಅಖಾಡಕ್ಕಿಳಿಯಲಿದ್ದಾರೆ ರಾಜಕೀಯದ ಈ ಚಾಣಾಕ್ಷರು..!ಸ್ಫೋಟಕ ಮಾಹಿತಿ ಕೊಟ್ಟ ಸಚಿವ ವಿಶ್ವನಾಥ್...!
ಮುಂಬರುವ 2019 ರ ಲೋಕಸಭಾ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೇ ಪ್ರಬಲ ಎದುರಾಳಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ.
ಸುದೀರ್ಘ ರಾಜಕೀಯ ಇತಿಹಾಸ ಹೊಂದಿರುವ ಎಚ್.ಡಿ.ದೇವೇಗೌಡ ಅವರ ರಾಜಕೀಯ ಅನುಭವವನ್ನು ಗಮನಿಸಿದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇವೇಗೌಡರೇ ಪರ್ಯಾಯ ನಾಯಕ ಎಂಬುದರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ. ದೇವೇಗೌಡರೇ ಏಕೆ ಮುಂದಿನ ಪ್ರಧಾನಿ ಯಾಗಬಾರದು," ಎಂದು ಪ್ರಶ್ನಿಸಿದರು. "ಪ್ರಾದೇಶಿಕ ಪಕ್ಷಗಳೊಂದಿಗೆ ಸೇರಿ ರಾಷ್ಟ್ರೀಯ ಪಕ್ಷಗಳು ಅಧಿಕಾರ ಹಿಡಿಯುತ್ತಿವೆ. ಆಂಧ್ರಪ್ರದೇಶ, ತೆಲಂಗಾಣ, ಈಶಾನ್ಯ ಭಾಗದಲ್ಲಿಯೂ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯವಿದೆ. ಇದನ್ನು ಗಮನಿಸಿದರೆ ಇಂದಿನ ರಾಜಕೀಯ ಪ್ರಾದೇಶಿಕ ಪಕ್ಷಗಳಿಗೆ ಸ್ಥಳೀಯ ಸಮಸ್ಯೆಗಳ ಆರಿವಿರುತ್ತದೆ. ಇದೇ ಕಾರಣಕ್ಕೆ ಕಾವೇರಿ ಬಿಕ್ಕಟ್ಟು ತಲೆದೋರಿದಾಗ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಎಚ್.ಡಿ.ದೇವೇಗೌಡ ಅವರನ್ನು ಹುಡುಕಿಕೊಂಡು ಬಂದರು. ಇದನ್ನು ಗಮನಿಸಿಯೆ ಜನರು ಸ್ಥಳೀಯ ಪಕ್ಷಗಳಿಗೆ ಒಲವು ತೋರುತ್ತಿದ್ದಾರೆ. ಹಾಗಾಗಿ ಈ ಪಕ್ಷಗಳು ಒಗ್ಗೂಡಿ ದೇಶದ ಆಡಳಿತ ಚುಕ್ಕಾಣಿ ಹಿಡಿಯುವ ಕಾಲ ಬಂದಿದೆ. ಈ ಕಾರ್ಯದಲ್ಲಿ ಮುಂದಾಳತ್ವವಹಿಸಲು ಶಕ್ತಿ ದೇವೇಗೌಡ ಅವರಿಗಿದೆ. ಹಾಗಾಗಿ ಮೋದಿ ಅವರಿಗೆ ಪ್ರಬಲ ಎದುರಾಳಿ ಆಗಲಿದ್ದಾರೆ," ಎಂದರು.
Comments