ಇನ್ಮುಂದೆ ಸರ್ಕಾರಿ ಶಾಲಾ ಮಕ್ಕಳಿಗೆ ಸಿಗಲಿದೆ ಈ ಭರ್ಜರಿ ಸೌಲಭ್ಯ..!!
ಸರ್ಕಾರಿ ಮತ್ತು ಬಿಬಿಎಂಪಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಬಡಮಕ್ಕಳಿಗೆ ಕನ್ನಡದ ಜತೆಗೆ ಇಂಗ್ಲಿಷ್ ಅನ್ನು ಒಂದು ವಿಷಯವಾಗಿ ಬೋಧಿಸಲು ಸಮ್ಮಿಶ್ರ ಸರ್ಕಾರ ಸಿದ್ದವಿದೆ. ಈ ವಿಚಾರದಲ್ಲಿ ಹುಸಿ ಕನ್ನಡಪರ ಹೋರಾಟಗಾರರ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಘೋಷಿಸಿದರು.
ಮೈಕ್ರೋಸಾಫ್ಟ್ ಸಂಸ್ಥೆಯ ಸಹಯೋಗದೊಂದಿಗೆ ಪಾಲಿಕೆ ವ್ಯಾಪ್ತಿಯ 156 ಶಾಲಾ-ಕಾಲೇಜುಗಳಲ್ಲಿ ಖಾಸಗಿ ಶಾಲೆಗಳಿಗೆ ಸರಿಸಮಾನವಾಗಿ ಗುಣಮಟ್ಟದ ಶಿಕ್ಷಣ ನೀಡುವ ಕುರಿತಂತೆ ಇಂದಿನಿಂದ ಆರಂಭಿಸಿರುವ ಬಿಬಿಎಂಪಿ ರೋಷಿಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕನ್ನಡ ಕನ್ನಡ ಎಂದು ಬೊಬ್ಬೆ ಇಡುವ ಕನ್ನಡಪರ ಹೋರಾಗಾರರು ತಮ್ಮ ಮಕ್ಕಳನ್ನು ಯಾವ ಶಾಲೆಗಳಲ್ಲಿ ಓದಿಸುತ್ತಿದ್ದಾರೆ ಎಂಬುದು ನನಗೆ ಗೊತ್ತಿದೆ. ನೀವು ಯಾವ ಶಾಲೆಯಲ್ಲಿ ಓದಿಸುತ್ತಿದ್ದೀರಿ ಎಂಬ ಬಗ್ಗೆ ಜಾಹೀರಾತು ಕೊಟ್ಟಿಬಿಡಿ. ಇಂಗ್ಲಿಷ್ ಖಾಸಗಿ ಶಾಲೆಗಳ ಗೊತ್ತಾ ? ಬಿಬಿಎಂಪಿ ಶಾಲೆಗಳ ಮಕ್ಕಳಿಗೆ ಇಂಗ್ಲಿಷ್ ಬೇಡವಾ? ಇನ್ನು ಮುಂದೆ ಸರ್ಕಾರಿ ಹಾಗೂ ಪಾಲಿಕೆ ಶಾಲೆಗಳು ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಸಲು ನಮ್ಮ ಸಮ್ಮಿಶ್ರ ಸರ್ಕಾರ ಸಿದ್ದ ಎಂದು ಪ್ರಕಟಿಸಿದರು.
ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನವೇ ಸರ್ಕಾರಿ ಹಾಗೂ ಬಿಬಿಎಂಪಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ಕೊಡಿಸಬೇಕು ಎಂಬುದು ನನ್ನ ಹಾಗೂ ಡಿಸಿಎಂ ಪರಮೇಶ್ವರ್ ಅವರ ಕನಸಾಗಿತ್ತು. ಆ ಕನಸು ಇಂದು ಮೈಕ್ರೋ ಸಾಫ್ಟ್ ಸಂಸ್ಥೆಯ ಮೂಲಕ ನನಸಾಗುತ್ತಿದೆ ಎಂದು ಹೇಳಿದರು. ಪ್ರತಿ ಬಡ ಕುಟುಂಬಗಳು ನೆಮ್ಮದಿಯಿಂದ ಬದುಕಬೇಕೆಂಬುದೆ ನಮ್ಮ ಸರ್ಕಾರದ ಉದ್ದೇಶವಾಗಿದೆ. ಮೈಕ್ರೋ ಸಾಫ್ಟ್ ಸಂಸ್ಥೆಯವರು ಬಿಬಿಎಂಪಿ ಶಾಲೆಗಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಬಂದಿರುವ ಈ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಂಡಿರುವುದು ನನ್ನ ಜೀವನದ ಸಂತಸದ ಕ್ಷಣ ಎಂದು ಬಣ್ಣಿಸಿದರು. ಇದುವರೆಗೆ ಪಾಲಿಕೆ ಶಾಲೆಗಳೆಂದರೆ ಗುಣಮಟ್ಟದ ಶಿಕ್ಷಣ ಸಿಗುವುದಿಲ್ಲ ಎಂದು ನಂಬಲಾಗಿದ್ದು, ಇನ್ನು ಮುಂದೆ ಉತ್ತಮ ಗುಣಮಟ್ಟದ ಶಿಕ್ಷಣಸಿಗಲಿದೆ ನೀವು ಕೂಡ ತಂದೆ-ತಾಯಿಗಳ ನಿರೀಕ್ಷೆಗೆತಕ್ಕಂತೆ ಬೆಳೆಯಬಹುದು ಇದಕ್ಕೆ ನಮ್ಮ ಸರ್ಕಾರ ಎಲ್ಲ ಸಹಕಾರ ನೀಡಲಿದೆ ಎಂದರು.
Comments