ಹಾಟ್ ಡ್ರಿಂಕ್ಸ್ ಪ್ರಿಯರಿಗೆ ರಾಜ್ಯ ಸರ್ಕಾರದಿಂದ ಸಿಕ್ತು ಗುಡ್ ನ್ಯೂಸ್..!!
ರಾಜ್ಯದಲ್ಲಿ ಮತ್ತೆ ವೈನ್ ಶಾಪ್‌ಗಳಿಗೆ ಪರವಾನಗಿ ನೀಡಲು ರಾಜ್ಯ ಸರ್ಕಾರ ಸಜ್ಜಾಗಿರುವಂತಿದ್ದು, ತಾಲೂಕು ಪ್ರದೇಶಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಎಲ್ಲೆಲ್ಲಿ ಮತ್ತು ಎಷ್ಟು ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ನೀಡಬಹುದು ಎಂಬ ಬಗ್ಗೆ ಸಮೀಕ್ಷೆ ನಡೆಸುವಂತೆ ಆದೇಶವನ್ನು ಹೊರಡಿಸಿದೆ.
ಅಬಕಾರಿ ಆಯುಕ್ತರು ಎಲ್ಲಾ ಅಬಕಾರಿ ಉಪ ಆಯು ಕ್ತರಿಗೆ ಇತ್ತೀಚೆಗೆ ಆದೇಶ ನೀಡಿದ್ದು, ತಾಲೂಕು ಗಳಲ್ಲಿ ಹೊಸದಾಗಿ ಚಿಲ್ಲರೆ ಮದ್ಯ ಮಾರಾಟದ ಅಂಗಡಿ ತೆರೆಯಲು ಅವಶ್ಯವಿರುವ ಸಿಎಲ್- 2 (ಚಿಲ್ಲರೆ ಮದ್ಯ ಮಾರಾಟ ಮಳಿಗೆ) ಸನ್ನದುಗಳ ಕುರಿತು ಮಾಹಿತಿ ಕ್ರೋಡೀಕರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಅಬಕಾರಿ ಉಪ ಆಯುಕ್ತರುಗಳು ಕಾರ್ಯೋನ್ಮುಖವಾಗಿದ್ದು, ಮದ್ಯದಂಗಡಿಗಳನ್ನು ಎಲ್ಲೆಲ್ಲಿ ತೆರೆಯಬಹುದು ಎಂಬುದರ ಕುರಿತು ಸಮೀಕ್ಷೆಯಲ್ಲಿ ತೊಡಗಿದ್ದಾರೆ. ಈ ಕುರಿತು ತಿಂಗಳಾಂತ್ಯದೊಳಗೆ ಸರ್ಕಾ ರಕ್ಕೆ ಮಾಹಿತಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
Comments