ನಮ್ಮ ಕಣ್ಣು ನಮ್ಮ ದೊಡ್ಡಬಳ್ಳಾಪುರ, ವಡ್ಡರಹಳ್ಳಿ ಗ್ರಾಮದ ಏಳು ಮಂದಿ ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಣೆ
ಕರ್ನಾಟಕ ಸರ್ಕಾರ, ದೃಷ್ಠಿ ಕಣ್ಣಿನ ಆಸ್ಪತ್ರೆ ಮತ್ತು ಎಸ್ಸಿಲಾರ್ ಜೊತೆಯಾಗಿ ಆಯೋಜಿಸಿರುವ ನಮ್ಮ ಕಣ್ಣು, ನಮ್ಮ ದೊಡ್ಡಬಳ್ಳಾಪುರ ಕಾರ್ಯಕ್ಕೆ ಇಂದು ಅಧಿಕೃತವಾಗಿ ಒಕ್ಕಲಿಗರ ಸಮುದಾಯ ಭವನದಲ್ಲಿ ಚಾಲನೆ ನೀಡಲಾಯಿತು, ಅಧ್ಯಕ್ಷರು, ಎಸ್ಸಿಲಾರ್ ವಿಷನ್ ಫೌಂಡೇಷನ್, ಪ್ರಾನ್ಸ್, ಮಿಸ್ ಐಚ ಮೊಕದಾಹಿ ಕಾರ್ಯಕ್ರಮ ಉದ್ಘಾಟಿಸಿದರು, ಕರ್ನಾಟಕ ಸರ್ಕಾರದ ಆಡಳಿತಾಧಿಕಾರಿಗಳಾದ ಯೋಗೇಶ್ ಗೌಡ, ಓಂ ಪ್ರಕಾಶ್ ಪಾಟಿಲ್, ಎಸ್ಸಿಲಾರ್ ಹೆಚ್.ಓ.ಡಿ. ಜಯಂತ್ ಭುವರಗನ್, ದೃಷ್ಠಿ ನಿರ್ದೇಶಕಿ ಅಂಜಲಿ ಜೋಷಿ, ಉಪಾಧ್ಯಕ್ಷ, ಎಸ್ಸಿಲಾರ್ ಇಂಟರ್ ನ್ಯಾಷನಲ್, ಸಿಂಗಾಪೂರ್ ಸುಗಟ ಬ್ಯಾನರ್ಜಿ, ಮ್ಯಾನೇಜಿಂಗ್ ಡೈರೆಕ್ಟರ್, ಎಸ್ಸಿಲಾರ್ ಮನೋಜ್ ಪಗೋತ್ರ, ನಗರಸಭಾ ಉಪಾಧ್ಯಕ್ಷೆ ಜಯಲಕ್ಷ್ಮಿ, ನಗರಸಭಾ ಸದಸ್ಯ ಭಾಸ್ಕರ್, ದೃಷ್ಠಿ ಆಸ್ಪತ್ರೆಯ ಇನ್ ಚಾರ್ಜ್ ಬಾಲು, ಹಾಜರಿದ್ದರು.
ಉದ್ಘಾಟನಾ ಭಾಷಣ ಮಾಡಿದ ಯೋಗೇಶ್ ಗೌಡ ಈ ಯೋಜನೆ ಭಾರತದಲ್ಲೇ ಪ್ರಥಮವಾಗಿ ದೊಡ್ಡಬಳ್ಳಾಪುರದಲ್ಲಿ ಉದ್ಘಾಟನೆಗೊಳ್ಳುತ್ತಿದೆ, ನಗರ ಮತ್ತು ತಾಲ್ಲೂಕಿನ 374 ಹಳ್ಳಿಗಳ ಪ್ರತಿ ಮನೆ ಮನೆಗೂ ಹೋಗಿ ಎಲ್ಲರ ಕಣ್ಣುಗಳನ್ನು ಪರೀಕ್ಷಿಸಿ ಅವಶ್ಯಕತೆ ಇರುವವರಿಗೆ ಉಚಿತವಾಗಿ ಕನ್ನಡಕ ನೀಡಲಾಗುವುದು, ತಾಲ್ಲೂಕಿನ ಪ್ರತಿಯೊಬ್ಬರು ಈ ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು.
ಓಂ ಪ್ರಕಾಶ್ ಪಾಟಿಲ್ ಮಾತನಾಡುತ್ತಾ ನಗರದ ಎಲ್ಲಾ ನಗರಸಭಾ ಸದಸ್ಯರೂ ತಮ್ಮ ತಮ್ಮ ವಾರ್ಡ ಗಳಲ್ಲಿನ ಪ್ರತಿಯೊಂದು ಮನೆಗಳಿಗೂ ತಜ್ಞರನ್ನು ಕರೆದುಕೊಂಡು ಹೋಗಿ ಕಣ್ಣಿನ ಪರೀಕ್ಷೆ ಮಾಡಿಸಿ ಅವಶ್ಯಕತೆ ಇರುವವರಿಗೆ ಉಚಿತ ಕನ್ನಡಕ ಕೊಡಿಸಬೇಕು ಎಂದು ಮನವಿ ಮಾಡಿಕೊಂಡರು. ಎಸ್ಸಿಲಾರ್ ಹೆಚ್.ಓ.ಡಿ. ಜಯಂತ್ ಭುವರಗನ್ ಮಾತನಾಡುತ್ತಾ 1992 ರಲ್ಲಿ ಎಸ್ಸಿಲಾರ್ ಕಂಪನಿ ಪ್ರಥಮವಾಗಿ ದೊಡ್ಡಬಳ್ಳಾಪುರದಲ್ಲಿ ಕಣ್ಣಿನ ಲೆನ್ಸ್ ತಯಾರಿಕಾ ಘಟಕ ಪ್ರಾರಂಬಿಸಿದೆವು, ಅದು ಇಂದು ಬೃಹದಾಕಾರವಾಗಿ ಬೆಳೆದು ನಿಂತಿದೆ, ಈಗ ನಮ್ಮ ಕಣ್ಣು ನಮ್ಮ ದೊಡ್ಡಬಳ್ಳಾಪುರ ಕೂಡಾ ಬಾರತದಲ್ಲೇ ಪ್ರಥಮವಾಗಿ ಇಲ್ಲಿಂದಲೇ ಪ್ರಾರಂಭಿಸುತ್ತಿದ್ದೇವೆ ಅದಕ್ಕಾಗಿ ಈ ಊರಿಗೆ ನಾವು ಚಿರಋಣಿಯಾಗಿರುತ್ತೇವೆ ಎಂದು ಹೇಳಿದರು. ತಾಲ್ಲೂಕಿನ ವಡ್ಡರಹಳ್ಳಿ ಗ್ರಾಮದ ಏಳು ಮಂದಿ ಫಲಾನುಭವಿಗಳಿಗೆ ಉಚಿತವಾಗಿ ಕನ್ನಡಕ ನೀಡಲಾಯಿತು.
Comments