ರಾಜ್ಯ ಸರ್ಕಾರದಿಂದ ರೈತರಿಗೆ ಭರ್ಜರಿ ಗಿಫ್ಟ್ ..! 22 ಲಕ್ಷ ಮಂದಿಗೆ ಸಾಲ ಋಣಮುಕ್ತ ಪತ್ರ ವಿತರಣೆ..! ಯಾರ್ಯಾರಿಗೆ ಗೊತ್ತಾ?

ರಾಜ್ಯ ಸರ್ಕಾರವು ರೈತರಿಗೆ ದಸರಾ, ದೀಪಾವಳಿಗೆ ಭರ್ಜರಿ ಉಡುಗೊರೆ ನೀಡಿದ್ದು, 22 ಲಕ್ಷ ರೈತರಿಗೆ ಬೆಳಸಾಲ ಮನ್ನಾದಿಂದ ಮುಕ್ತಿ ಹೊಂದಿರುವ ಋಣ ಮುಕ್ತ ಪ್ರಮಾಣ ಪತ್ರವನ್ನು ವಿತರಣೆ ಮಾಡಲಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಹಕಾರ ಸಚಿವ ಬಂಡೆಪ್ಪ ಖಾಶೆಂಪುರ ಅವರು, ಸಹಕಾರ ವಲಯದ ಸಾಲಮನ್ನಾ ಮಾರ್ಗಸೂಚಿಯನ್ನು ರಾಜ್ಯದ ಎಲ್ಲ ಸಹಕಾರ ಬ್ಯಾಂಕ್ ಗಳಿಗೆ ಇಂದೇ ರವಾನಿಸಲಾಗುವುದು. ಸಾಲಮನ್ನಾಕ್ಕೆ ಸಂಬಂಧಿಸಿದ ಬಿಲ್ ಗಳನ್ನು ಕ್ಲೈಮ್ ಮಾಡಲು ಬ್ಯಾಂಕ್ ಗಳು ಅ. 5 ರೊಳಗೆ ಸರ್ಕಾರಕ್ಕೆ ಸಲ್ಲಿಸಲು ಸೂಚಿಸಲಾಗಿದೆ. ರೈತರಿಗೆ ದಸರಾ ಹಾಗೂ ದೀಪಾವಳಿ ನಡುವೆ ಬೃಹತ್ ಕಾರ್ಯಕ್ರಮ ಅಯೋಜಿಸಿ ಪ್ರಮಾಣ ಪತ್ರ ನೀಡಲಾಗುವುದು. ಜು. 10 ರ ವರೆಗಿನ ಎಲ್ಲ ಬೆಳೆ ಸಾಲವನ್ನು ಒಂದು ಲಕ್ಷ ರೂ. ವರೆಗೆ ಮನ್ನಾ ಮಾಡಲಿದೆ ಎಂದು ತಿಳಿಸಿದರು. ರೈತರ ಉಳಿತಾಯ ಖಾತೆಗೆ ಸಾಲಮನ್ನಾದ ಹಣ ಜಮೆಯಾಗಲಿದೆ. ವೇತನದಾರರು, ಪಿಂಚಣಿದಾರರು, ಆದಾಯ ತೆರಿಗೆ ಪಾವತಿದಾರರಿಂದ ಸ್ವಯಂ ಘೋಷಣೆ ಪತ್ರ ಪಡೆದು ಸಾಲಮನ್ನಾ ಯೋಜನೆ ಜಾರಿಗೊಳಿಸಲಾಗುವುದು ಎಂದರು.
Comments