ಸದ್ದಿಲ್ಲದೆ ‘ಆಪರೇಷನ್ ಕಮಲ’ ಕ್ಕೆ ಗುನ್ನಾ ಇಟ್ಟರು ಎಚ್’ಡಿಕೆ-ಎಚ್’ಡಿಡಿ..! ಐವರು ಬಿಜೆಪಿ ಶಾಸಕರು ಸಂಪರ್ಕದಲ್ಲಿ..!!

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ರಾಜಕೀಯ ಸಂಕಷ್ಟದ ಸಂದರ್ಭದಲ್ಲಿ ಮಾಜಿ ಪ್ರಧಾನಿ, ತಂದೆ ಎಚ್.ಡಿ.ದೇವೇಗೌಡರು ಕೊಟ್ಟ ಬ್ರಹ್ಮಾಸ್ತ್ರ ಯಶಸ್ವಿಯಾಗಿದ್ದು , ಎದುರಾಳಿಪಡೆಯನ್ನು ಎರಡು ಹೆಜ್ಜೆ ಹಿಂದಕ್ಕೆ ಸರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೊದಲನೇ ಹೆಜ್ಜೆ 'ಆಪರೇಷನ್ ಕಮಲ'ದಿಂದ ಪಾರುಮಾಡಿದ್ದು, ಎರಡನೇ ಹೆಜ್ಜೆ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಯನ್ನೇ ಕಣದಿಂದ ಸರಿಸಿದ್ದು, ಇಂತಹ ರಾಜಕೀಯ ತಂತ್ರಗಾರಿಕೆಯನ್ನು ಮಾಜಿ ಪ್ರಧಾನಿ ದೇವೇಗೌಡರು ಕಳೆದ ವಾರವೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬತ್ತಳಿಕೆಯಲ್ಲಿ ಇರಿಸಿದ್ದರು ಎನ್ನಲಾಗಿದೆ. 'ಆಪರೇಷನ್ ಕಮಲ'ದ ಮುಖಾಂತರ ಅಧಿಕಾರದ ಗದ್ದುಗೆ ಏರಲು ಕನಸು ಕಾಣುತ್ತಿದ್ದ ಬಿಜೆಪಿಗೆ ಸದ್ದಿಲ್ಲದೆ ಏಟು ಕೊಡಲು ಆರಂಭಿಸಿದ ಕುಮಾರಸ್ವಾಮಿ ಕಲಬುರಗಿಗೆ ಹೋದಾಗ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ್ ಗೆ ನೇರ ಆಫರ್ ಕೊಟ್ಟಿದ್ದರು. ಅದಕ್ಕೂ ಮುನ್ನವೇ ಬಿಜೆಪಿಯ ಐದು ಶಾಸಕರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ ಎನ್ನುವ ಹೇಳಿಕೆ ನೀಡುವ ಮೂಲಕ ಸಿಎಂ ವಿರೋಧಿ ಪಾಳಯದಲ್ಲಿ ಸಂಚಲನ ಉಂಟು ಮಾಡಿದ್ದರು. ಅದಕ್ಕೆ ಪೂರಕ ಎಂಬಂತೆ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನ ಮೂರು ಅಧಿಕೃತ ಅಭ್ಯರ್ಥಿಗಳಿಗೆ ಬಿಜೆಯಿಂದ ಐವರು ಶಾಸಕರು ಅಡ್ಡ ಮತದಾನ ಮಾಡುತ್ತಾರೆ ಎಂಬ ಮಾಹಿತಿ ಯಡಿಯೂರಪ್ಪ ಕಿವಿಗೆ ಬೀಳುವಂತೆಯೂ ನೋಡಿಕೊಂಡರು. ಇದರಿಂದ ಪರಿಷತ್ ಚುನಾವಣೆಯ ಸಹವಾಸವೇ ಬೇಡವೆಂದು ಬಿಜೆಪಿ ಹಿಂದೆ ಸರಿದಿದೆ. ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್, ಮಾಲೀಕಯ್ಯ ಗುತ್ತೇದಾರ್ ಹಾಗೂ ಡಿ.ಜೆ ಪುಟ್ಟಸ್ವಾಮಿಯವರನ್ನು ಕಣಕ್ಕಿಳಿಸಲು ಎಲ್ಲಾ ರೀತಿಯ ಸಿದ್ಧತೆ ನಡೆಸಿತ್ತು, ತಮಗೆ ಕಡಿಮೆ ಬೀಳುವ ಎಂಟು ಮತವನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ಖರೀದಿಸಲು ಚಿಂತನೆ ನಡೆಸಿತ್ತು. ಇದಕ್ಕೆ ಎದುರೇಟು ಕೊಟ್ಟ ಕುಮಾರಸ್ವಾಮಿ ಬಿಜೆಯಿಂದಲೇ ಐದು ಮತಗಳನ್ನು ಅಡ್ಡಮತದಾನ ಆಗುವಂತೆ ನೋಡಿಕೊಳ್ಳಲು ಮುಂದಾಗಿದ್ದರು. ಇದು ಯಡಿಯೂರಪ್ಪನವರಿಗೆ ಖಾತ್ರಿಯಾಗಿತ್ತು. ಇದೆಲ್ಲದರ ಬೆಳವಣಿಗೆ ಇನ್ನೆಲೆಯಲ್ಲಿ ಬಿಜೆಪಿ ಕಣದಿಂದ ಹಿಂದೆ ಸರಿದಿದೆ.ಇಷ್ಟೆಲ್ಲಾ ಬೆಳವಣಿಗೆಗಳ ನಂತರ ಕುಮರಸ್ವಾಮಿ ಸಮ್ಮಿಶ್ರ ಸರ್ಕಾರಕ್ಕೆ ಎದುರಾಗಿದ್ದ ಸಂಕಷ್ಟವನ್ನು ನಿವಾರಿಸಿದ್ದಾರೆ.
Comments