ಚುನಾವಣೆಗೂ ಮುನ್ನವೇ ಬಿಜೆಪಿ ಗೆ ಭಾರೀ ಮುಖಭಂಗ..! ಸಿಎಂ ಎಚ್'ಡಿಕೆ ರವರ ನಡೆಗೆ ಬೆಚ್ಚಿಬಿದ್ದು ಕಣದಿಂದ ಹಿಂದೆ ಸರಿದ ಸಿ.ಪಿ.ಯೋಗೇಶ್ವರ್!
ವಿಧಾನಪರಿಷತ್ ಉಪಚುನಾವಣಾ ಕಣದಿಂದ ವಿಪಕ್ಷ ಬಿಜೆಪಿ ಹಿಂದೆ ಸರಿದಿದ್ದು, ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರಲು ನಿರ್ಧರಿಸಿದೆ. ಮೂರು ಸ್ಥಾನಗಳಿಗೆ ನಡೆಯುವ ಉಪ ಚುನಾವಣೆಯಲ್ಲಿ ಬಿಜೆಪಿ ಈ ಮೊದಲು ತೀರ್ಮಾನಿಸಿದಂತೆ ಮಾಜಿ ಶಾಸಕರಾದ ಸಿ.ಪಿ.ಯೋಗೇಶ್ವರ್, ಮಾಲೀಕಯ್ಯ ಗುತ್ತೇದಾರ್ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಬಿ.ಜೆ.ಪುಟ್ಟಸ್ವಾಮಿ ಅವರನ್ನು ಕಣಕ್ಕಿಳಿಸುವ ಬಗ್ಗೆ ವದಂತಿಗಳು ಕೇಳಿ ಬಂದಿದ್ದವು.
ಆದರೆ, ಇಂದು ಮಧ್ಯಾಹ್ನ 12 ಗಂಟೆ ನಂತರ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ತೀರ್ಮಾನದಿಂದ ಹಿಂದೆ ಸರಿಯಿತು. ಚುನಾವಣೆಯಲ್ಲಿ ಸ್ಪರ್ಧಿಸಿ ಮುಖಭಂಗ ಅನುಭವಿಸುವ ಬದಲು ಹಿಂದೆ ಸರಿಯುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಪಕ್ಷದ ನಾಯಕರು ಬಂದಿದ್ದಾರೆ. ಸಂಖ್ಯಾ ಬಲ ಕೊರತೆ ಹಿನ್ನಲೆಯಲ್ಲಿ ಉಪ ಚುನಾವಣಾ ಕಣದಿಂದಲೇ ಬಿಜೆಪಿ ಹಿಂದೆ ಸರಿದಿದೆ. ಅ.4 ರಂದು ವಿಧಾನಪರಿಷತ್ ನ ಮೂರು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಮೈತ್ರಿ ಆಧಾರದ ಮೇಲೆ ಈಗಾಗಲೇ ಕಾಂಗ್ರೆಸ್ ಇಬ್ಬರು ಹಾಗೂ ಜೆಡಿಎಸ್ ಓರ್ವ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಪರಿಷತ್ ಗೆ ಅಭ್ಯರ್ಥಿಗಳ ಆಯ್ಕೆಗೆ 112 ಶಾಸಕರ ಮತಗಳ ಅಗತ್ಯವಿದ್ದು, ಆದರೆ ಹೆಚ್ಚುವರಿ 8 ಶಾಸಕರ ಮತಗಳು ಕೊರತೆಯಾದ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರಲು ನಿರ್ಧರಿಸಿದೆ. ಸಧ್ಯ ಬಿಜೆಪಿ ಸಂಖ್ಯಾ ಬಲ 104 ಇದೆ.
Comments