ರಾಜ್ಯ ಸರ್ಕಾರದಿಂದ SC/ST ನೌಕರರಿಗೆ ಸಿಹಿ ಸುದ್ದಿ..!!
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (SC/ST) ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ಜಾರಿಯಾಗಲಿದ್ದು, ಜಾರಿಯಾಗಲೇ ಬೇಕಾಗಿದೆ ಅಂತ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಅವರು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, SC/ST ಬಡ್ತಿ ಮೀಸಲಾತಿ ಜಾರಿಯಾಗಲೇ ಬೇಕು, ಇದು ನಮ್ಮ ಬದ್ದತೆ ಕ್ಯಾಬಿನೆಟ್ ನಲ್ಲಿ ನಡೆದಿದ್ದನ್ನ ನಾನು ಬಹಿರಂಗ ಪಡಿಸಲು ಆಗಲ್ಲ ಸಿಎಂ, ಡಿಸಿಎಂ ಜೊತೆ ಈ ಬಗ್ಗೆ ಮಾತಾಡಿದ್ದೇನೆ ಜಾರಿ ಮಾಡುವ ವಿಶ್ವಾಸ ನನಗಿದೆ ವಿಚಾರ ಸುಪ್ರೀಂಕೋರ್ಟ್ ಮುಂದಿದೆ ಹೀಗಾಗಿ ಸ್ವಲ್ಪ ತಡವಾಗಬಹುದು ಅಂತ ಹೇಳಿದರು. ಇನ್ನು ಸಿಎಂ ಎಚ್’ಡಿಕೆ SC/ST ಬಡ್ತಿ ಮೀಸಲಾತಿ ತಡೆಯೊಡ್ಡುತ್ತಿದ್ದಾರೆ ಎನ್ನುವುದು ಸುಳ್ಳು ನಮಗೆ ಆ ವಿಚಾರದಲ್ಲಿ ಬದ್ಧತೆಯಿದೆ ಅಂತ ತಿಳಿಸಿದರು.
Comments