ಸಿಎಂ ಎಚ್’ಡಿಕೆ ಕೈ ಸೇರಿದೆ ಆಪರೇಷನ್ ಕಮಲದ ವರದಿ..! ಸಿಎಂ ರವರ ಈ ಅಸ್ತ್ರಕ್ಕೆ ಬಿಜೆಪಿ ಆಗಲಿದೆ ಧೂಳೀಪಟ.!!

ಆಪರೇಷನ್ ‘ಕಮಲ’ದ ವರದಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೈ ಸೇರಿದೆ. ಮೈತ್ರಿ ಸರ್ಕಾರ ಉರುಳಿಸಲು ಬಿಜೆಪಿ ಪ್ರಯತ್ನಿಸಿರೋದು ಸತ್ಯ ಎಂಬುದಾಗಿ ಗುಪ್ತಚರ ಇಲಾಖೆ ಅಧಿಕಾರಿಗಳು ವರದಿ ನೀಡಿದ್ದಾರೆ.
25ಕ್ಕೂ ಹೆಚ್ಚು ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ಬಿಜೆಪಿ ಗಾಳ ಹಾಕಿದ್ದು, ಪ್ರತಿಯೊಬ್ಬ ಶಾಸಕರಿಗೂ 5 ರಿಂದ 50 ಕೋಟಿ ವರೆಗೂ ಆಮಿಷ ಒಡ್ಡಿದ್ದಾರೆ. ಬಿಜೆಪಿಯ 10ಕ್ಕೂ ಹೆಚ್ಚು ನಾಯಕರು ‘ಆಪರೇಷನ್ ಕಮಲ’ ಕಮಲದ ರುವಾರಿಗಳಾಗಿದ್ದಾರೆ. ಅದರಲ್ಲಿ ಪ್ರಮುಖವಾಗಿ ಯಡಿಯೂರಪ್ಪ, ಶ್ರೀರಾಮಲು, ಸಿ.ಪಿ.ಯೋಗೇಶ್ವರ್, ಸತೀಶ್ ರೆಡ್ಡಿ, ಎಸ್.ಆರ್ ವಿಶ್ವನಾಥ್, ಶೋಭಾ ಕರಂದ್ಲಾಜೆ, ಅಶ್ವತ್ಥ್ ನಾರಾಯಣ್, ರೇಣುಕಾಚಾರ್ಯ, ಮುರಗೇಶ್ ನಿರಾಣಿ, ಪ್ರಭಾಕಾರ್ ಕೋರೆ ಬಸವರಾಜ್ ಬೊಮ್ಮಯಿ ಪ್ರಮುಖರಾಗಿದ್ದಾರೆ. ಇನ್ನು ಬೆಂಗಳೂರಿನ ಕೆಲ ಹೋಟೆಲ್ ಸೇರಿದಂತೆ ಬೇರೆ ಬೇರೆ ಸ್ಥಳಗಳಲ್ಲಿ ಶಾಸಕರನ್ನು ಬಿಜೆಪಿ ನಾಯಕರು ಸಂಪರ್ಕ ಮಾಡಿದ್ದಾರೆ. ಬರೀ ಶಾಸಕರನ್ನಷ್ಟೇ ಅಲ್ಲದೆ ಶಾಸಕರ ಕುಟುಂಬ ಸದಸ್ಯರನ್ನೂ ಕೂಡ ಬಿಜೆಪಿ ನಾಯಕರು ಭೇಟಿ ಮಾಡಿ ಆಮಿಷ ಒಡ್ಡಿದ್ದಾರಂತೆ.ಆದರೆ ಇದುವರೆಗೂ ಯಾವ ಶಾಸಕರೂ ಕೂಡ ಮುಂಬೈಗೆ ಹೋಗಿಲ್ಲ ಎಂದು ಸಿಎಂಗೆ ರಾಜ್ಯ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
Comments