ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕೋತ್ಸವ ಹಾಗೂ ಜಿ.ರಾಮೇಗೌಡ ಸಹಕಾರ ಭವನ ವಾಣಿಜ್ಯ ಮಳಿಗೆಗಳ ಸಂಕೀರ್ಣ ಉದ್ಘಾಟನೆ






ನಗರಸಭೆ ಮುಖ್ಯ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಾಣಿಜ್ಯ ಮಳಿಗೆಗಳ ಸಂಕೀರ್ಣವನ್ನು ಕರ್ನಾಟಕ ಸರ್ಕಾರದ ಸಹಕಾರ ಸಚಿವ ಬಂಡೆಪ್ಪ ಕಾಶಂಪುರ್ ಉದ್ಘಾಟಿಸಿ ಮಾತನಾಡಿ ಬಡವರ ಬಂದು ಯೋಜನೆ ಅಡಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ನಿತ್ಯ ಸಾಲ ನೀಡುವ ಯೋಜನೆಗೆ ಹತ್ತು ದಿನಗಳಲ್ಲಿ ಚಾಲನೆ ನೀಡಲಾಗುವುದು ಎಂದರು, ಉದ್ಘಾಟನೆಗೂ ಮುನ್ನ ಕೃಷಿ ಮಾರುಕಟ್ಟೆಗೆ ಭೇಟಿ ನೀಡಿ ಬಡವರ ಬಂದು ಯೋಜನೆ ಕುರಿತಂತೆ ಬೀದಿ ಬದಿ ವ್ಯಾಪಾರಿಗಳೊಂದಿಗೆ ಸಂವಾದ ನಡೆಸಿದರು. ರೈತರಿಗೆ ವಾಣಿಜ್ಯ ಬ್ಯಾಂಕುಗಳಿಗಿಂತಲೂ ಹೆಚ್ಚಾಗಿ ಸಹಕಾರಿ ವಲಯದ ಬ್ಯಾಂಕುಗಳು ನೆರವಾಗಿವೆ ಎಂದು ಸಂಸದ ಎಂ. ವೀರಪ್ಪಮೊಯಿಲಿ ಹೇಳಿದರು.
ಕೇಂದ್ರ ರೇಷ್ಮೆ ಮಂಡಲಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಶಾಸಕ ವೆಂಕಟರಮಣಯ್ಯ, ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಜಿ.ಪಂ.ಸದಸ್ಯ ಚುಂಚೇಗೌಡ, ಸಂಘದ ಉಪಾಧ್ಯಕ್ಷೆ ಜಯಭಾರತಿ, ನಗರಸಭಾಧ್ಯಕ್ಷ ತ.ನ.ಪ್ರಭುದೇವ್, ಉಪಾಧ್ಯಕ್ಷೆ ಜಯಲಕ್ಷ್ಮಿ, ನಗರಸಭಾ ಸದಸ್ಯ ರವಿಕುಮಾರ್, ಶಿವಕುಮಾರ್, ಆಗಮಿಸಿದ್ದರು ಟಿ.ಎ.ಪಿ.ಎಂ.ಸಿ. ಅಧ್ಯಕ್ಷ ಬಿ.ಅಶ್ವಥ್ ನಾರಾಯಣ್ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಕಾರ್ಯ ನಿರ್ವಾಹಕ ಎಚ್.ಆನಂದರಾಮಯ್ಯ ವಾರ್ಷಿಕ ವರದಿ ಮಂಡಿಸಿ 1949ರಲ್ಲಿ ಸ್ಥಾಪನೆಯಾದ ಸಂಘದಲ್ಲಿ 3234 ಸದಸ್ಯರಿದ್ದು ಈ ಸಾಲಿನಲ್ಲಿ 2.72 ಕೋಟಿ ಲಾಭ ಗಳಿಸಿದೆ ಎಂದು ತಿಳಿಸಿದರು, ಸಂಘದ ಸದಸ್ಯರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
Comments