ನಗರದ ನಾಗರೀಕರಿಗೆ ಸಿಹಿ ಸುದ್ದಿ! ನಾಳೆಯಿಂದ ಅಧಿಕೃತವಾಗಿ ಟೋಲ್ ಸಂಗ್ರಹ ಆರಂಭ ?
ಬೆಂಗಳೂರಿನಿಂದ ಹೊರ ಹೋಗುವ ಎಲ್ಲಾ ಮಾರ್ಗಗಳಲ್ಲಿಯೂ ಟೋಲ್ ಇದೆ. ಆದರೆ ಯಲಹಂಕ ಮಾರ್ಗವಾಗಿ ದೊಡ್ಡಬಳ್ಳಾಪುರ, ಗೌರಿಬಿದನೂರು, ಹಿಂದೂಪುರಕ್ಕೆ ತೆರಳುವ ಮಾರ್ಗದಲ್ಲಿ ಇದುವರೆಗೂ ಯಾವುದೇ ಟೋಲ್ ಇಲ್ಲ ಅನ್ನೋ ನೆಮ್ಮದಿ ಇತ್ತು. ಈಗ ಈ ರಸ್ತೆಯಲ್ಲಿ ಎರಡು ಕಡೆಗಳಲ್ಲಿ ಟೋಲ್ ನಿರ್ಮಾಣವಾಗಿದ್ದು, ನಾಳೆಯಿಂದ ಅಧಿಕೃತವಾಗಿ ಟೋಲ್ ಹಣ ಸಂಗ್ರಹ ಶುರುವಾಗಲಿದೆ. ವಿಪರ್ಯಾಸ ಅಂದ್ರೆ, ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾಮಗಾರಿಯೇ ಮುಗಿದಿಲ್ಲ! ದೊಡ್ಡಬಳ್ಳಾಪುರದಿಂದ ಯಲಹಂಕದವರೆಗೂ ಬಹುತೇಕ ಕಡೆಯಲ್ಲಿ ಸಿಂಗಲ್ ರಸ್ತೆಯಿದೆ, ಎಲ್ಲಿಯೂ ಕೂಡ ಸರ್ವೀಸ್ ರಸ್ತೆಯಿಲ್ಲ. ಹಾಗಿದ್ದರೂ ಕೂಡ ಟೋಲ್ ಸಂಗ್ರಹಕ್ಕೆ ಮುಂದಾಗಿರೋದು ಈ ರಸ್ತೆಯಲ್ಲಿ ಸಂಚರಿಸೋ ವಾಹನ ಸವಾರರಿಗೆ ಹೊರೆ, ಕಾಮಗಾರಿ ಪೂರ್ಣಗೊಳ್ಳದೇ ಟೋಲ್ನಲ್ಲಿ ಹಣ ಸಂಗ್ರಹಕ್ಕೆ ಮುಂದಾಗಿದ್ದರೂ, ಆ ರಸ್ತೆಯಲ್ಲಿ ಸಂಚರಿಸೋ ಇಬ್ಬರು ಶಾಸಕರು, ಓರ್ವ ಸಚಿವರು ಸೇರಿದಂದಂತೆ ಹಲವು ಜನಪ್ರತಿನಿಧಿಗಳು ಮೌನವಾಗಿರೋದು ಮತ್ತೊಂದು ದುರಂತವೇ ಸರಿ. ಈ ಸುದ್ದಿ ನಿಜವೇ ಆಗಿದ್ದಲ್ಲಿ ಇದೊಂದು ಸರ್ಕಾರಿ ಪ್ರಾಯೋಜಿತ ಹಗಲು ದರೋಡೆಯೇ.
Comments