ಬಿಜೆಪಿಯ ಅಪರೇಷನ್ 'ಕಮಲ' ವನ್ನ ಭೇದಿಸಲು ದೊಡ್ಡಗೌಡ್ರು ಎಂಟ್ರಿ..!

ಸಮ್ಮಿಶ್ರ ಸರ್ಕಾರದ ನಾಯಕರ ನಡುವಿನ ವೈಮನಸ್ಸಿನ ಲಾಭಾ ಪಡೆಯಲು ಮುಂದಾಗಿರುವ ಬಿಜೆಪಿಗೆ ತೀರುಗೇಟು ನೀಡಲು ಸ್ವತಃ ಈಗ ಜೆಡಿಎಸ್ ವರಿಷ್ಠ ದೇವೇಗೌಡರು ರಾಜ್ಯ ರಾಜಕೀಯಕ್ಕೆ ಮಧ್ಯ ಪ್ರವೇಶಿಸಲು ಮುಂದಾಗಿದ್ದಾರೆ.
ಸಮ್ಮಿಶ್ರ ಸರ್ಕಾರದ ವಿರುದ್ಧ ಅತೃಪ್ತಿ ಹೊಂದಿರುವ ಶಾಸಕರನ್ನು ತನ್ನತ್ತ ಸೆಳೆಯಲು ಬಿಜೆಪಿ ಅಪರೇಷನ್ ಕಮಲಕ್ಕೆ ಮುಂದಾಗಿದೆ. ಇದರಿಂದಾಗಿ ಎಚ್ಚೆತ್ತ ಕಾಂಗ್ರೆಸ್-ಜೆಡಿಎಸ್ ನಾಯಕರು ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇದಕ್ಕಾಗಿ ಯಾವ ಹಂತಕ್ಕಾದರೂ ಹೋಗಿ ಸರ್ಕಾರ ಉಳಿಸಿಕೊಳ್ಳಬೇಕಿಂದು ಪಣಕೂಡ ತೊಟ್ಟಿದ್ದಾರೆ. ಇದಕ್ಕಾಗಿ ಅಪರೇಷನ್ ಕಮಲದ ಇಂಚಿಂಚು ಮಾಹಿತಿ ಕಲೆ ಹಾಕಲು ಮುಂದಾಗಿದ್ದು, ಶಾಸಕರ ಕತೆ ಮಾಹಿತಿ ಸಂಗ್ರಹಕ್ಕೂ ಸೂಚನೆ ನೀಡಿದ್ದಾರೆ. ಜಾರಕಿಹೊಳಿ ಅತೃಪ್ತಿ ಬೆನ್ನಲ್ಲೇ ಕಾಂಗ್ರೆಸ್ ತೊರೆಯಲು ಸಿದ್ದವಾಗಿದ್ದ 16 ಕಾಂಗ್ರೆಸ್ ಶಾಸಕರು ಸೇರಿದಂತೆ ಜೆಡಿಎಸ್ನ ಅತೃಪ್ತ ಶಾಸಕರ ಜೊತೆ ಬಿಜೆಪಿ ಅಪರೇಷನ್ ಕಮಲದ ಕುರಿತು ಮಾತುಕತೆ ನಡೆಸಿದ್ದರೇ, ಈ ಬಗ್ಗೆ ಶಾಸಕರ ಕರೆ ಮಾಹಿತಿ ಕಲೆ ಹಾಕುವಂತೆ ಸೂಚನೆ ನೀಡಿದ್ದರು. ಇನ್ನು ದೇವೇಗೌಡರ ಸಲಹೆಯಂತೆ ಕಾಂಗ್ರೆಸ್ ಪಡೆ ಅಪರೇಷನ್ ಕಮಲ ಮಾಹಿತಿ ಪಡೆಯಲು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ರಿಂದ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದರು.
keyworld:hd devegowda,
Comments