ಸ್ವಾರ್ಥ ರಾಜಕಾರಣ ಬಿಟ್ಟು ದೋಸ್ತಿ ಶಾಸಕರನ್ನು ಹದ್ದು ಬಸ್ತಿನಲ್ಲಿಡಿ, ಇಲ್ಲಾ ರಾಜಿನಾಮೆ ಕೊಟ್ಟು ಹೊರಡಿ
ದಿನಾಂಕ 21-09-2018 ರ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ನಗರದ ಹಳೆ ಬಸ್ ನಿಲ್ದಾಣದ ಸಿದ್ದಲಿಂಗಯ್ಯ ವೃತ್ತದಲ್ಲಿ ಭಾರತೀಯ ಜನತಾ ಪಾರ್ಟಿ ಯುವಮೋರ್ಚಾದ ವತಿಯಿಂದ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಜವಾಬ್ದಾರಿಯನ್ನು ಮರೆತು ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಳು ಮಾಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ದಂಗೆ ಎಳಲು ಜನರಿಗೆ ನೀಡಿರುವ ಬೇಜಾವಬ್ದಾರಿ ಹೇಳಿಕೆಯನ್ನು ಖಂಡಿಸಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ನವರ ಮನೆ ಮೇಲೆ ಕಾಂಗ್ರೆಸ್ ಕಾರ್ಯಕರ್ತರ ಮುತ್ತಿಗೆಯನ್ನು ವಿರೋಧಿಸಿ ಪ್ರತಿಭಟನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು,
ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಎಚ್.ಎಸ್.ಶಿವಶಂಕರ್ ಮಾತನಾಡಿ, ಮೂರು ಜಿಲ್ಲೆ ದಾಟದ ರಾಷ್ಟ್ರೀಯ ಪಕ್ಷ ಹಾಗೂ ಒಂದು ಕುಟುಂಬಕ್ಕೆ ಸೀಮತವಾದ ಪಕ್ಷ ನಿಮ್ಮದು, ಜಗತ್ತಿನ ಅತ್ಯಂತ ದೊಡ್ಡದಾದ, ಕೋಟ್ಯಂತರ ಕಾರ್ಯಕರ್ತರಿರುವ ಪಕ್ಷ ಬಿಜೆಪಿ, ಇದರ ವಿರುದ್ದವೇ ದಂಗೆ ಏಳಲು ಕರೆ ನೀಡುತ್ತೇನೆ ಅಂತಿರಲ್ಲ ನೀವು ಒಬ್ಬ ಮುಖ್ಯಮಂತ್ರಿನಾ? ಒಂದೇ ರಾಜ್ಯದ ಮಕ್ಕಳನ್ನ ಒಬ್ಬರಮೇಲೊಬ್ಬರನ್ನು ಎತ್ತಿ ಕಟ್ಟಿ ದಂಗೆ ಮಾಡಿಸೋ ನಿಮ್ಮ ಈ ನೀಚ ಮನಸ್ಥಿತಿಗೆ ಮರುಕ ಪಡಬೇಕಷ್ಟೇ, ಸುಮ್ಮನೆ ಬಿಜೆಪಿ ಯ ಮೇಲೆ ಗೂಬೆ ಕೂರಿಸುವುದು ಬಿಟ್ಟು ನಿಮ್ಮ ದೋಸ್ತಿ ಶಾಸಕರನ್ನು ಹದ್ದುಬಸ್ತಿನಲ್ಲಿಡಲು ಕೈಲಾದರೆ ಪ್ರಯತ್ನಿಸಿ, ನಿಮ್ಮ ಸ್ವಾರ್ಥಕ್ಕೆ ನಮ್ಮನ್ನು ಯಾಕೆ ದಂಗೆ ಎಬ್ಬಿಸುತ್ತೀರಿ..? ಕಾಂಗ್ರೆಸ್ ಕಾರ್ಯಕರ್ತರಿಂದ ವಿರೋಧ ಪಕ್ಷ ನಾಯಕರ ಮನೆಯ ಮುಂದೆ ಗೂಂಡಾಗಿರಿ ಮಾಡಿ ಧಂಗೆ ಏಳಿಸುತ್ತಿರುವ ಮುಖ್ಯಮಂತ್ರಿಗಳೇ ಅಹಿತಕರ ಘಟನೆಗಳು ನಡೆದರೆ ನೀವೇ ನೇರಹೊಣೆ ಎಂದು ಹೇಳಿದರು.
37 ಸ್ಥಾನ ಗೆಲ್ಲಿಸಿದ್ದಕ್ಕೆ ಕರುನಾಡನ್ನೇ ಬಲಿಕೊಡಲು ಹೊರಟಿದ್ದೀರಿ, ಸಾಂಧರ್ಭಿಕ ಶಿಶುವಾಗಿ ಆಕಸ್ಮಿಕ ಮುಖ್ಯ ಮಂತ್ರಿಯಾಗಿದ್ದೀರಿ ಒಳ್ಳೆ ಕೆಲಸಮಾಡಿ, ಇಲ್ಲದಿದ್ದರೆ ರಾಜಿನಾಮೆ ಕೊಟ್ಟು ಹೊರಡಿ, ಅದು ಬಿಟ್ಟು ಬಾಯಿಗೆ ಬಂದಂತೆ ಮಾತನಾಡಿದರೆ ಮುಂದಿನ ದಿನಗಳಲ್ಲಿ 37 ಇರೋ ಸೀಟು ಮೂರಕ್ಕೆ ಇಳಿಯುತ್ತದೆ ಎಂದು ವಕೀಲ ರವಿ ಮಾವಿನಕುಂಟೆ ಹೇಳಿದರು. ಸದ್ಯ ರಾಜ್ಯದಲ್ಲಿ ನಡೆಯುತ್ತಿರುವುದು ಆಪರೇಷನ್ ಕಮಲವೋ ಅಥವಾ ಆಪರೇಷನ್ ಹಸ್ತವೋ ತಿಳಿಯುತ್ತಿಲ್ಲ. 78 ಸೀಟು ಹೊಂದಿದ್ದ ಕಾಂಗ್ರೇಸ್, 37 ಸೀಟು ಇರುವ ಜೆಡಿ(ಎಸ್)ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದ್ದೆ ಇದಕ್ಕೆಲ್ಲಾ ಕಾರಣ, ಸರ್ಕಾರ ಸಾರ್ವಜನಿಕರದು, ಯಾರಪ್ಪನ ಮನೆ ಸ್ವತ್ತಲ್ಲ ಎಂದು ರಾಮಕೃಷ್ಣ ಹೇಳಿದರು.
ಪ್ರತಿಭಟನೆಯಲ್ಲಿ ನಗರಸಭಾ ಸದಸ್ಯ ಮುದ್ದಪ್ಪ, ಯುವ ಮೋರ್ಚ ಉಪಾಧ್ಯಕ್ಷ ಶಿವು, ಮೋದಿ ಬಾಯ್ಸ್ ಅಧ್ಯಕ್ಷ ನರೇಂದ್ರ, ಗೋಪಿ, ತಾಲ್ಲೂಕು ಅಧ್ಯಕ್ಷ ಲಕ್ಷ್ಮೀಪತಿ, ಭಾರತೀಯ ಜನತಾ ಪಾರ್ಟಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು ಹಾಜರಿದ್ದರು.
Comments