ಆಪರೇಷನ್ 'ಕಮಲ'ವನ್ನು ತಿರುಗುಬಾಣವಾಗಿಸಲು ಜೆಡಿಎಸ್ ನಿಂದ ಬಿಗ್ ಸ್ಕೆಚ್..!'ಕಮಲ'ವನ್ನ ಕಮರಿಸಲು ಸಿಎಂ ಮಾಸ್ಟರ್ ಪ್ಲಾನ್..!!
ಆಪರೇಷನ್ ಕಮಲಕ್ಕೆ ಪ್ರತಿಯಾಗಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರವನ್ನು ಉಳಿಸಿಕೊಳ್ಳಲು ಮಾಸ್ಟರ್ ಪ್ಲಾನ್‌ನೊಂದಿಗೆ ಸಜ್ಜಾಗಿದೆ ಎನ್ನಲಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರಕ್ಕೆ ಯಾವುದೇ ರೀತಿಯ ಧಕ್ಕೆ ಆಗದಂತೆ ಸುಭದ್ರತೆ ಕಾಪಾಡುವ ಉದ್ದೇಶದಿಂದ ಆಪರೇಷನ್ ಕಮಲವನ್ನು ತಿರುಗುಬಾಣವಾಗಿಸಲು ಸದ್ದಿಲ್ಲದೆ ಒಳಗೊಳಗೆ ಬಿಗ್ ಸ್ಕೆಚ್ ರೂಪಿಸಲಾಗಿದೆ.
ಜಾರಕಿಹೊಳಿ ಬ್ರದರ್ಸ್ ನಿಂದ ಎದ್ದಿರುವ ಭಿನ್ನಮತವನ್ನು ಲಾಭವಾಗಿ ಪಡೆದುಕೊಳ್ಳಲು ಬಿಜೆಪಿ ನಾನಾ ಕಸರತ್ತುಗಳನ್ನು ನಡೆಸಿದೆ. ಮೈತ್ರಿ ಸರಕಾರವನ್ನು ಉರುಳಿಸಲು ಹಲವು ಮಾಸ್ಟರ್ ಪ್ಲಾನ್‌ಗಳನ್ನು ಮಾಡುತ್ತಿದೆ. ಇದಕ್ಕೆ ಪ್ರತಿಯಾಗೆ ಜೆಡಿಎಸ್ ಕೂಡ ಈ ರೀತಿ ಮಾಸ್ಟರ್ ಪ್ಲಾನ್ ಮಾಡಿದೆ ಎನ್ನಲಾಗಿದೆ. ತಮ್ಮ ಪಕ್ಷದ ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಜೆಡಿಎಸ್ ಮಾಸ್ಟರ್ ಪ್ಲಾನ್ ಮಾಡಿದೆ. ಇದಕ್ಕಾಗಿ ಬೆಂಗಳೂರಿನಿಂದ ಹೊರಗೆ ಎಲ್ಲಾ ಶಾಸಕರನ್ನೂ ಒಟ್ಟಿಗೆ ಸೇರಿಸಿ ಆಂತರಿಕ ಸಭೆ ನಡೆಸಲು ಜೆಡಿಎಸ್ ನಿರ್ಧರಿಸಿದೆ. ಯಾವುದೇ ಕಾರಣಕ್ಕೂ ಆತುರದ ನಿರ್ದಾರ ತೆಗೆದುಕೊಳ್ಳಬೇಡಿ ಎಂದು ಸಭೆಯಲ್ಲಿ ಅತೃಪ್ತ ಶಾಸಕರುಗಳಿಗೆ ಜೆಡಿಎಸ್‌ನ ನಾಯಕರು ಶಾಂತಿ ಪಾಠ ಮಾಡಲಿದ್ದಾರೆ.
Comments