ಬಿಜೆಪಿ ನಾಯಕ ಆರ್. ಅಶೋಕ್ ಹೇಳಿಕೆಗೆ ಎದುರೇಟು ಕೊಟ್ಟ ಸಿಎಂ ಎಚ್'ಡಿಕೆ

21 Sep 2018 11:21 AM |
385 Report

ಸರ್ಕಾರಕ್ಕೆ ತೊಂದರೆ ನೀಡಿದರೆ ನಾನು ಸುಮ್ಮನಿರಲ್ಲ, ನಾಡಿನ ಜನರಿಗೆ ಬಿಜೆಪಿ ವಿರುದ್ಧ ದಂಗೆ ಏಳುವಂತೆ ಕರೆ ಕೊಡ್ತೇನೆ ಎಂದು ಹೇಳಿಕೆ ನೀಡಿದ್ದರು, ಸಿಎಂ ಅವರ ಈ ಹೇಳಿಕೆ ಭಾರತೀಯ ದಂಡ ಸಮಿತಿ ಐಪಿಸಿ ಸೆಕ್ಶನ್ 124 ಪ್ರಕಾರ ಇದು ರಾಜ್ಯ ದ್ರೋಹದ ಅಪರಾದ ಎಂದು ಆರೋಪಿಸಿದರು.

ಇವರ ಈ ಆರೋಪಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಈ ರೀತಿ ಎದುರೇಟು ಕೊಟ್ಟಿದ್ದಾರೆ. ದಂಗೆ ಅಂದ್ರೆ ಜನರ ಪ್ರತಿಭಟನೆ ಇದರಲ್ಲಿ ತಪ್ಪೇನಿದೆ ಪ್ರಶ್ನಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಈ ಹಿಂದೆ ಸರ್ಕಾರದ ವಿರುದ್ಧ ದೊಣ್ಣೆ, ಬಡಿಗೆ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದ್ದರು. ಇದಕ್ಕಿಂತ ಕೆಟ್ಟ ಪದವನ್ನು ನಾನು ಬಲಸಿಲ್ಲವಲ್ಲ ಎಂದಿದ್ದಾರೆ.

Edited By

Shruthi G

Reported By

hdk fans

Comments