ಸಹೋದರರ ಭಾಂಧವ್ಯದ ಬೆಸುಗೆ : ಸಿಎಂ ಕುಮಾರಣ್ಣ ನಿಂದ ರೇವಣ್ಣನಿಗೆ ಕಿವಿಮಾತು
ಚನ್ನರಾಯಪಟ್ಟಣದ ಉದಯಪುರದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು, ರೇವಣ್ಣಗೆ 24 ಗಂಟೆಯಲ್ಲಿ ಜಿಲ್ಲೆಯ ಅಭಿವೃದ್ಧಿ ಮಾಡಬೇಕು ಎಂಬ ಹುಚ್ಚು ಮತ್ತು ಕನಸಿದೆ. ಅದು ನನಸಾಗಬೇಕಾದರೆ ಮೊದಲು ಕೋಪ ಬಿಡಬೇಕು, ಆತುರ ತ್ಯಜಿಸಬೇಕು ಎಂದರು.
ಹೀಗೆ ತಮ್ಮ ಸಹೋದರ ಸಚಿವ ಎಚ್.ಡಿ. ರೇವಣ್ಣನವರಿಗೆ ಕಿವಿಮಾತು ಅವರ ಕಿರಿಯ ಸಹೋದರ, ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕಿವಿಮಾತು ಹೇಳಿದರು. ನಮ್ ರೇವಣ್ಣ ಹೃದಯವಂತ. ಆದರೆ ಕೋಪಿಸಿಕೊಳ್ಳುವುದು ಹುಟ್ಟು ಗುಣ. ಇದರಿಂದ ಆತ ಮಾಡಿದ ಬೆಟ್ಟದಷ್ಟುಅಭಿವೃದ್ಧಿ ಕೆಲಸಗಳೆಲ್ಲಾ ಹೊಳೆಯಲ್ಲಿ ಹುಣಸೆ ಹಣ್ಣು ತೊಯ್ದಂತೆ ಆಗುತ್ತಿದೆ. ಕೋಪ ಬಿಟ್ಟರೆ ಇನ್ನೂ ಎತ್ತರಕ್ಕೆ ಬೆಳೆಯಬಹುದು' ಎಂದರು. ನನ್ನ ಬಳಿ ರೇವಣ್ಣ ಬಂದು ಹಾಸನ ಜಿಲ್ಲೆ ಅಭಿವೃದ್ಧಿಗೆ ಓವರ್ ನೈಟ್ ಹಣ ಬಿಡುಗಡೆ ಮಾಡಬೇಕೆಂದು ಪಟ್ಟು ಹಿಡಿಯುತ್ತಾನೆ.
Comments