ಸಿಎಂ ಆಗುವ ಬಿ.ಎಸ್. ವೈ ಕನಸಿಗೆ ಖಡಕ್ ಟಕ್ಕರ್ ಕೊಟ್ಟ ಜಮೀರ್ ಅಹಮ್ಮದ್..!!

ಎಲ್ಲರೂ ರಾತ್ರಿ ಕನಸು ಕಂಡ್ರೆ ಬಿ.ಎಸ್. ಯಡಿಯೂರಪ್ಪನವರು ಸರ್ಕಾರ ಕೆಡವಲು ಹಗಲುಗನಸು ಕಾಣ್ತಿದ್ದಾರೆ ಅಂತ ಜಮೀರ್ ಅಹಮ್ಮದ್ ಖಾನ್ ವ್ಯಂಗ್ಯವಾಡಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಅಹಮ್ಮ ಅವರು, ಬಿ ಎಸ್ ಯಡಿಯೂರಪ್ಪ ಸಿಎಂ ಆಗಲು ಸಾಧ್ಯವೇ ಇಲ್ಲ ಎಂದು ಭವಿಷ್ಯ ನುಡಿದರು.
ಇನ್ನು ಬೆಳಗಾವಿ ಜಿಲ್ಲೆಯಲ್ಲಿ ಕೆಲವೊಂದು ಭಿನ್ನಾಬಿಪ್ರಾಯಗಳು ಇದ್ದವು. ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಮುಖಂಡರು ಎಲ್ಲವನ್ನು ಬಗೆಹರಿಸಿದ್ದಾರೆ ಎಂದು ಜಮೀರ್ ಅಹ್ಮದ್ ಸ್ಪಷ್ಟಪಡಿಸಿದರು. ಡಿ.ಕೆ.ಶಿವಕುಮಾರ್ ಅವರಿಗೆ ಇಡಿ ಯಿಂದ ಇನ್ನೂ ನೊಟೀಸ್ ಬಂದೇ ಇಲ್ಲ. ಆದರೆ ಕೆಲವರು ಹಾಗೆ, ಹೀಗೆ ಅಂತಿದ್ದಾರೆ ಎಂದು ಸಚಿವ ಜಮೀರ್ ಕಿಡಿಕಾರಿದರು.
Comments