ಬಿ.ಎಸ್.ವೈ ವಿರುದ್ಧ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಎಚ್'ಡಿಕೆ.. ಸಿಎಂ ಈ ಗುಡುಗಿಗೆ ಬೆಚ್ಚಿಬಿದ್ದ ಬಿ.ಎಸ್.ವೈ..!!

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನವರ ವಿರುದ್ದ ಹೊಸ ಬಾಂಬ್ ಸಿಡಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ 'ಪರ್ಸಂಟೇಜ್ ಸಿಸ್ಟಂನ ಜನಕ ಯಡಿಯೂರಪ್ಪ. ಆ ಸಿಸ್ಟಂ ತಂದವರು ಯಾರು ? ಅದರ ಪಿತೃ ಯಡಿಯೂರಪ್ಪ ಮಹಾನುಭಾವ. ಅಪ್ಪ ಮಕ್ಕಳ ಬಗ್ಗೆ ಚರ್ಚೆ ಮಾಡುವುದನ್ನು ನಿಲ್ಲಿಸಿ ನಾವೇನು ಲೂಟಿಕೋರರಾ? ರಾಜ್ಯವನ್ನು ಲೂಟಿ ಹೊಡೆದವರು ನೀವು ಎಂದು ಗುಡುಗಿದರು.
ಕಾಂಗ್ರೆಸ್ ಸುಧೀರ್ಘ ಸರ್ಕಾರ ನಡೆಸಿದರೂ ಅವರಿಗೆ ಆ ಯೋಚನೆ ಬಂದಿರಲಿಲ್ಲ'ಎಂದು ಕಿಡಿಕಾರಿದರು. ಆವತ್ತು ನಮ್ಮನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಅವರೇ ಜೈಲಿಗೆ ಹೋದರು ಎಂದು ಲೇವಡಿ ಮಾಡಿದರು. ಯಡಿಯೂರಪ್ಪ ಅವರು ವಯಸ್ಸಿಗೆ ತಕ್ಕ ಹಾಗೆ ಮಾತಾಡಲಿ.ಅವರ ಮಾತಿನಲ್ಲಿ ಗಾಂಭೀರ್ಯ ಮತ್ತು ಹಿಡಿತ ಇರಲಿ. ನಾವು ಅಧಿಕಾರ ಇದ್ದಾಗ ರಾಜ್ಯದ ಸಂಪತ್ತು ಉಳಿಸಲು ಯತ್ನಿಸಿದವರು. ಸರ್ಕಾರ ನನ್ನ ಕೈಯಲ್ಲಿ ಇದೆ, ನಾಳೆ ಬೆಳಗ್ಗೆ ಏನು ಮಾಡಬೇಕು ಎಂದು ಗೊತ್ತಿದೆ. ಸ್ವಲ್ಪ ಎಚ್ಚರಿಕೆಯಿಂದ ಮಾತಾಡಿ' ಎಂದರು.
ಅಯ್ಯೋ ರಾಮ ಯಡಿಯೂರಪ್ಪ ಏನು ಮಾಡಲ್ಲ, ಅದೇ ಆಗಿ ಬಿದ್ದು ಹೋಗಲಿ ಅಂತಾರೆ. 18 ಜನರನ್ನು ಕರೆದುಕೊಂಡು ಮುಂಬಯಿಗೆ ಪ್ರಯಾಣ ಮಾಡ್ತಾರಂತೆ. ತುರ್ತು ಅಂತ ನಾಗಮಂಗಲ ಎಂಎಲ್‌ಎ ಸುರೇಶ್ ಗೌಡ್ರಿಗೆ ಫೋನ್ ಮಾಡ್ತಾರೆ' ಎಂದು ಕಿಡಿ ಕಾರಿದರು. ಬೌರಿಂಗ್ ಇನ್ಸಿಟ್ಯೂಟ್‌ನಲ್ಲಿ ಸಭೆ ನಡೆಸುತ್ತಿದ್ದಾರೆ. ನನಗೆ ಇಂಚಿಂಚು ಮಾಹಿತಿ ಬರುತ್ತದೆ. ನಮ್ಮ ಶಾಸಕ ಶಿವಳ್ಳಿ ಅವರಿಗೆ ಮಧ್ಯ ರಾತ್ರಿ ಕರೆ ಬರುತ್ತದೆ. ಮುಂಬಯಿಯಿಂದ ಶಾಸಕರನ್ನು ಮಿಲಿಟರಿ ಫೋರ್ಸ್ ಜೊತೆ ವಿಧಾನಸೌಧಕ್ಕೆ ಕರೆದುಕೊಂಡು ಬರುತ್ತಾರಂತೆ. ವ್ಯರ್ಥ ಕಸರತ್ತು ಯಾತಕೆ , ಘನಂದಾರಿ ಕೆಲ್ಸ ಮಾಡ್ತಾ ಇದ್ದೀರಾ ? ನೀವು ನಮ್ಮ ಮೇಲೆ ಯಾಕೆ ಆರೋಪ ಮಾಡುತ್ತೀರಿ , ರಾಜ್ಯದ ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ' ಎಂದು ಕಿಡಿಕಾರಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಈ ಗುಡುಗಿಗೆ ಬಿ.ಎಸ್.ಯಡಿಯೂರಪ್ಪ ನವರು ದಿಗ್ಬ್ರಮೆಗೊಂಡಿದ್ದಾರೆ ಎನ್ನಲಾಗಿದೆ.
Comments