ಸಚಿವ ಸಂಪುಟ ವಿಸ್ತರಣೆ ಗೆ ಮುಹೂರ್ತ ಫಿಕ್ಸ್..!ಕೊನೆಗೂ ಫೈನಲ್ ಆದ ಸಚಿವರ ಪಟ್ಟಿ.. ಯಾರ್ಯಾರಿಗೆ ಯಾವ ಸ್ಥಾನ?
ನಿಗಮ ಮಂಡಳಿ ಮತ್ತು ಸಂಪುಟ ವಿಸ್ತರಣೆ ಕುರಿತು ಅಕ್ಟೋಬರ್ 3ರ ನಂತರ ಚರ್ಚೆಗೆ ಬರುವಂತೆ ರಾಜ್ಯ ನಾಯಕರಿಗೆ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಸಚಿವರಾಗಲು ಬಯಸುವವರು ಇನ್ನು ಒಂದು ತಿಂಗಳು ಕಾಯುವುದು ಅನಿವಾರ್ಯವಾಗಿದೆ ಅಂತ ರಾಹುಲ್ ಗಾಂಧಿ ಹೇಳಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ.
ಪರಿಷತ್ ಚುನಾವಣೆಗೆ ಮೈತ್ರಿ ಸೂತ್ರದಂತೆ 6 ಸ್ಥಾನದಲ್ಲಿ ಜೆಡಿಎಸ್‍ಗೆ 2, ಕಾಂಗ್ರೆಸ್‍ಗೆ 4 ಸ್ಥಾನವನ್ನು ಪಡೆದುಕೊಂಡಿದ್ದು, ಚುನಾಯಿತ ಸ್ಥಾನಕ್ಕೆ ಈಗಾಗಲೇ ಆಕಾಂಕ್ಷಿಗಳ ಪಟ್ಟಿಯನ್ನು ರಾಹುಲ್ ಗಾಂಧಿಯವರು ಪಡೆದುಕೊಂಡಿದ್ದಾರೆ. ಆಕಾಂಕ್ಷಿತರ ಪಟ್ಟಿಯಲ್ಲಿ ನಿವೇದಿತ್ ಆಳ್ವ, ವೇಣುಗೋಪಾಲ್, ಯು.ಬಿ.ವೆಂಕಟೇಶ್, ರಾಮಚಂದ್ರಪ್ಪ, ನಾಗರಾಜ್ ಯಾದವ್ ,ರಾಣಿ ಸತೀಶ್, ಕಮಲಾಕ್ಷಿ ಸೇರಿದಂತೆ 12ಕ್ಕೂ ಹೆಚ್ಚು ಹೆಸರು ಪ್ರಸ್ತಾಪ ಮಾಡಲಾಗಿದೆ ಎಂದು ಹೇಳಲಾಗಿದೆ.
Comments