ರಾಜ್ಯ ಮಟ್ಟದ ಅಟಲ್ ಬಿಹಾರಿ ವಾಜಪೇಯಿ ಕಪ್ ಚಿತ್ರದುರ್ಗ ಮಡಿಲಿಗೆ....
ಶ್ರೀ ನರೇಂದ್ರ ದಾಮೋದರ ದಾಸ್ ಮೋದಿ ಅಭಿಮಾನಿಗಳ ಸಂಘ [ರಿ.] ಕೆರೆಬಾಗಿಲು, ದೊಡ್ಡಬಳ್ಳಾಪುರ. ಇವರ ವತಿಯಿಂದ ಮೋದಿ ಯವರ ಹುಟ್ಟು ಹಬ್ಬದ ಪ್ರಯುಕ್ತ ರಾಜ್ಯ ಮಟ್ಟದ ಪುರುಷರ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಗಳನ್ನು ದಿನಾಂಕ 16-9-2018 ಭಾನುವಾರ ಮತ್ತು 17-9-2018 ಸೋಮವಾರದಂದು ದಿ.ಅಟಲ್ ಬಿಹಾರಿ ವಾಜಪೇಯಿ, ದಿ.ಸಾಹಸಸಿಂಹ ಡಾ.ವಿಷ್ಣುವರ್ಧನ್, ದಿ.ಶ್ರೀಮಾನ್ ಮುನಿಯಪ್ಪ, ಹಾಗೂ ದಿ.ಶೇಖರ್ ಗೌಡ ಇವರ ಸವಿ ನೆನೆಪಿಗಾಗಿ ಕೆರೆಬಾಗಿಲು, ವೆಂಕಟೇಶ್ವರ ಸಾಮಿಲ್ ಪಕ್ಕ, ಟ್ಯಾಂಕ್ ರಸ್ತೆ, ದೊಡ್ಡಬಳ್ಳಾಪುರ ಇಲ್ಲಿ ನೆಡೆಸಲಾಯಿತು. 45 ತಂಡಗಳು ಭಾಗವಹಿಸಿದ್ದ ಈ ಪಂದ್ಯದಲ್ಲಿ ಅಭಿಜ್ಞಾ ಸ್ಪೋರ್ಟ್ಸ್ ಕ್ಲಬ್,ಮುತ್ತೂರು, ದೊಡ್ಡಬಳ್ಳಾಪುರದ ತಂಡವನ್ನು ಸೋಲಿಸಿ ಚಿತ್ರದುರ್ಗ ಜಿಲ್ಲಾ ತಂಡ ರಾಜ್ಯ ಮಟ್ಟದ ಅಟಲ್ ಬಿಹಾರಿ ವಾಜಪೇಯಿ ಕಪ್ ಮತ್ತು 25೦೦೦/- ನಗದು ಮತ್ತು ಪಾರಿತೋಷಕವನ್ನು ತಮ್ಮದಾಗಿಸಿಕೊಂಡರು. ಆಲ್ ರೌಂಡರ್ ಆಗಿ ಅಭಿಜ್ಞಾ ಸ್ಪೋರ್ಟ್ಸ್ ಕ್ಲಬ್,ಮುತ್ತೂರು ತಂಡದ ಆಟಗಾರ ಭಾಸ್ಕರ್ ಆಯ್ಕೆಯಾದರು.
ಸಂಜೆ ಏಳು ಘಂಟೆಗೆ ಮೋದಿಜಿ ಹಾಗೂ ವಿಷ್ಣುವರ್ಧನ್ ಹುಟ್ಟು ಹಬ್ಬದ ಅಂಗವಾಗಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಾಸಕ ಸಿ.ಟಿ.ರವಿ ಕೇಕ್ ಕತ್ತರಿಸುವ ಮೂಲಕ ಸಂಭ್ರಮಾಚರಣೆ ನಡೆಸಿ ಮೋದಿಯವರ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಿರುವ ಮೋದಿ ಬಾಯ್ಸ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಅಂತರ ರಾಷ್ಟ್ರೀಯ ಕ್ರೀಡಾ ಸಾಧಕಿ ಯೋಗಪಟು ಕು.ಗಾನಶ್ರೀ ರನ್ನು ಸನ್ಮಾನಿಸಲಾಯಿತು. ರಾತ್ರಿ 8 ಘಂಟೆಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆಯನ್ನು ನಗರಸಭಾ ಸದಸ್ಯ ಬಿ.ಕೆ.ಮುದ್ದಪ್ಪ, ಹೆಚ್.ಎಸ್.ಶಿವಶಂಕರ್, ಬಿ.ಸಿ.ಸತ್ಯನಾರಾಯಣ ಗೌಡ, ರಾಮಕೃಷ್ಣ, ಲೀಲಾ ಮಹೇಶ್, ಎಂ.ಕೆ.ವತ್ಸಲಾ, ಗಿರಿಜಾ, ಪುಷ್ಪ ಶಿವಶಂಕರ್, ಕವಿತ, ಶಿವು, ಮೋದಿ ಬಾಯ್ಸ್ ಅಧ್ಯಕ್ಷ ನರೇಂದ್ರ, ಪದಾಧಿಕಾರಿಗಳಾದ ಗಂಗಾಧರ, ಯೋಗೇಶ, ರಾಘವೇಂದ್ರ, ಗೌತಮ್, ಚಂದ್ರಶೇಖರ್, ಯಲ್ಲಪ್ಪ, ರಾಮಮೂರ್ತಿ, ರವಿಕುಮಾರ್, ಗುರುರಾಜ್, ನರಸಿಂಹ, ಡೈಮಂಡ್ ರಾಜ, ರವಿಚಂದ್ರನ್, ಮುರಳಿ ಮತ್ತಿತರರು ಹಾಜರಿದ್ದು ನಡೆಸಿಕೊಟ್ಟರು.
ಪ್ರಶಸ್ತಿ ಪಡೆದವರು:
ಚಿತ್ರದುರ್ಗ ಜಿಲ್ಲಾ ತಂಡ, ಪ್ರಥಮ ಬಹುಮಾನದೊಂದಿಗೆ ರೂ.25೦೦೦/- ನಗದು ಮತ್ತು ಪಾರಿತೋಷಕ.
ಅಭಿಜ್ಞಾ ಸ್ಪೋರ್ಟ್ಸ್ ಕ್ಲಬ್,ಮುತ್ತೂರು ದ್ವಿತೀಯ ಬಹುಮಾನದೊಂದಿಗೆ ರೂ. 2೦೦೦೦/- ನಗದು ಮತ್ತು ಪಾರಿತೋಷಕ.
ನಿಸರ್ಗ ಸ್ಪೋರ್ಟ್ಸ್ ಕ್ಲಬ್,ಬೆಂ. ತೃತೀಯ ಸ್ಥಾನದೊಂದಿಗೆ 1೦೦೦೦/- ರೂ. ನಗದು ಮತ್ತು ಪಾರಿತೋಷಕ.
ಜೇನುಘಟ್ಟನಹಳ್ಳಿ [ದೇವನಹಳ್ಳಿ ತಾ.] ಚತುರ್ಥ ಬಹುಮಾನ, 1೦೦೦೦/- ರೂ, ನಗದು ಮತ್ತು ಪಾರಿತೋಷಕ.
ಹಾಗೂ ಆಲ್ ರೌಂಡರ್ ಆಟಗಾರನಾಗಿ ಅಭಿಜ್ಞಾ ಸ್ಪೋರ್ಟ್ಸ್ ಕ್ಲಬ್, ಮುತ್ತೂರು ತಂಡದ ಭಾಸ್ಕರ್ ವಿಶೇಷ ಬಹುಮಾನ ಪಡೆದುಕೊಂಡರು.
Comments