ಸಂಜಯ ನಗರದಲ್ಲಿ ಮೋದಿ ಹುಟ್ಟುಹಬ್ಬದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ
ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗಗಳ ಮೋರ್ಚ, ನಗರ ಘಟಕ, ದೊಡ್ಡಬಳ್ಳಾಪುರ ಇವರ ವತಿಯಿಂದ ದಿನಾಂಕ 17-9-2018ರ ಇಂದು ಬೆಳಿಗ್ಗೆ 9-3೦ಕ್ಕೆ ಸಂಜಯನಗರದ ಸಮುದಾಯ ಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆತ್ರೇಯ ಆಯುರ್ವೇದ ಆಸ್ಪತ್ರೆ, ಇವರ ಸಹಯೋಗದೊಂದಿಗೆ ಪ್ರಧಾನ ಮಂತ್ರಿ ಮೋದಿ ಹುಟ್ಟುಹಬ್ಬದ ಪ್ರಯುಕ್ತ ಏರ್ಪಡಿಸಲಾಗಿತ್ತು, ಮುಖ್ಯ ಅತಿಥಿಗಳಾಗಿ ನಗರಸಭಾ ಸದಸ್ಯರಾದ ಹೆಚ್.ಎಸ್.ಶಿವಶಂಕರ್, ಕೆ.ಹೆಚ್.ವೆಂಕಟರಾಜು, ಬಿ.ಕೆ.ಮುದ್ದಪ್ಪ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಕೆ.ರಮೇಶ್ ಭಾಗವಹಿಸಿದ್ದರು, ಆತ್ರೇಯ ಆಯುರ್ವೇದ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿ ಆರೋಗ್ಯ ತಪಾಸಣೆ ನಡೆಸಿ ಉಚಿತವಾಗಿ ಔಷದಿ ನೀಡಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಮೋರ್ಚ ಉಪಾಧ್ಯಕ್ಷ ಶಿವು,ಮಾಜಿ ಜಿಲ್ಲಾಧ್ಯಕ್ಷ ನಾಗೇಶ, ಸುಬ್ರಮಣ್ಯ, ಬಿಜೆಪಿ ಕಾರ್ಯಕರ್ತರು ಸಂಜಯನಗರ ಹಾಗೂ ಸುತ್ತಮುತ್ತಲಿನ ನಾಗರಿಕರು ಹಾಜರಿದ್ದರು.
Comments