ವೀರ ಯೋಧರಿಗೆ ಗೌರವ ಪೂರ್ವಕ ಸನ್ಮಾನ
ದಿನಾಂಕ 16-9-2018 ರ ಭಾನುವಾರ ಮಧ್ಯಾನ್ಹ 3 ಘಂಟೆಗೆ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾವಳಿ ಉದ್ಘಾಟನೆಯನ್ನು ಮಜರಾಹೊಸಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಮ್ಮ ನೆರವೇರಿಸಿದರು, ವಿಶೇಷ ಆಹ್ವಾನಿತರಾಗಿ ವಕೀಲರು, ಸಮಾಜಸೇವಕರು ರವಿ ಮಾವಿನಕುಂಟೆ, ನಗರಸಭಾಧ್ಯಕ್ಷ ತ.ನ.ಪ್ರಭುದೇವ್, ವಕೀಲ ಧರಣೀಶ್, ಪ್ರಸನ್ನ ಚಿತ್ರ ಮಂದಿರದ ಮಾಲಿಕ ಪ್ರಸನ್ನಕುಮಾರ್ ಆಗಮಿಸಿದ್ದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಎಲ್.ಎನ್. ಸೇವಾ ಟ್ರಸ್ಟ್ ಸಂಸ್ಥಾಪಕ ಅನಿಲ್ ಕುಮಾರ್ ಗೌಡ ವಹಿಸಿದ್ದರು. ಈ ಪಂದ್ಯಾವಳಿಗೆ ಕೊಡಗು, ತುಮಕೂರು, ಚಿತ್ರದುರ್ಗ, ದಾವಣಗೆರೆ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಸೇರಿದಂತೆ ಒಟ್ಟು ೪೫ ತಂಡಗಳು ಭಾಗವಹಿಸಿವೆ. ಸಂಜೆ 7 ಘಂಟೆಗೆ ಭಾರತ ದೇಶದ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಹಾಗೂ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ವೀರ ಯೋಧರಿಗೆ ಗೌರವ ಪೂರ್ವಕ ಸನ್ಮಾನ ಸಲ್ಲಿಸಲಾಯಿತು.
17-9-2018 ರ ಸೋಮವಾರ ಬೆಳಿಗ್ಗೆ 8 ಘಂಟೆಗೆ ನರೇಂದ್ರ ಮೋದಿಜಿ ಹಾಗೂ ವಿಷ್ಣುವರ್ಧನ್ ಹುಟ್ಟುಹಬ್ಬದ ಪ್ರಯುಕ್ತ ಶ್ರೀ ಸಪ್ತಮಾತೃಕ ಮಾರಿಯಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಸಿಹಿ ವಿತರಣೆ. ಬೆಳಿಗ್ಗೆ 10 ಘಂಟೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು ಮತ್ತು ಹಣ್ಣುಗಳ ವಿತರಣೆ ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ವೈದ್ಯರಿಗೆ ಸನ್ಮಾನ, 11 ಘಂಟೆಯಿಂದ ಸಂಜೆವರೆಗೆ ನಿರಂತರ ಅನ್ನ ಸಂತರ್ಪಣೆ, ಮಧ್ಯಾನ್ಹ 3 ಘಂಟೆಗೆ ಮೋದಿಜಿ ಹಾಗೂ ವಿಷ್ಣುವರ್ಧನ್ ಭಾವಚಿತ್ರಗಳನ್ನು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ, ಸಂಜೆ 7 ಘಂಟೆಗೆ ಗ್ರಾಮೀಣ,ರಾಜ್ಯ, ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಕ್ರೀಡಾ ಸಾಧಕರಿಗೆ ಸನ್ಮಾನ, ರಾತ್ರಿ 8 ಘಂಟೆಗೆ ಮೋದಿಜಿ ಹಾಗೂ ವಿಷ್ಣುವರ್ಧನ್ ಹುಟ್ಟು ಹಬ್ಬದ ಸಂಭ್ರಮಾಚರಣೆ, ನಂತರ ಸಮಾರೋಪ ಸಮಾರಂಭ, ಬಹುಮಾನ ವಿತರಣೆ ಇರುತ್ತದೆ.
Comments