ಹದಿನೆಂಟನೇ ವರ್ಷದ ವಾರ್ಷಿಕೋತ್ಸವ ಆಚರಣೆ ತ್ಯಾಗರಾಜನಗರ ಶ್ರೀ ಏಕದಂತ ವಿನಾಯಕ ಗೆಳೆಯರ ಬಳಗದ ವತಿಯಿಂದ
ನಗರದ ತ್ಯಾಗರಾಜನಗರದಲ್ಲಿರುವ ಶ್ರೀ ಏಕದಂತ ವಿನಾಯಕ ಗೆಳೆಯರ ಬಳಗ ವತಿಯಿಂದ ಮೂರು ದಿನಗಳ ಕಾಲ ಶ್ರೀ ವಿನಾಯಕ ಮೂರ್ತಿಯ ಪೂಜಾ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಹದಿನೆಂಟನೇ ವರ್ಷದ ವಾರ್ಷಿಕೋತ್ಸವ ಆಚರಿಸಲಾಯಿತು. ತ್ಯಾಗರಾಜನಗರದ ಸದಸ್ಯರು, ಸ್ಥಾಯಿ ಸಮಿತಿ ಅಧ್ಯಕ್ಷರು ಆದ ಎನ್.ಕೆ.ರಮೇಶ್, ನಗರಸಭಾ ಸದಸ್ಯ ಡಿ.ಎಂ. ಚಂದ್ರಶೇಖರ್, ಮಹಿಳಾ ಮತ್ತು ಮಕ್ಕಳ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷೆ ರಾಜೇಶ್ವರಿ, ಕರ್ನಾಟಕ ನೇಕಾರ ರಕ್ಷಣಾ ವೇದಿಕೆ ಅಧ್ಯಕ್ಷ ಕೃಷ್ಣಕುಮಾರ್ ವಾರ್ಷಿಕೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಶ್ರೀ ಏಕದಂತ ವಿನಾಯಕ ಗೆಳೆಯರ ಬಳಗ ಅಧ್ಯಕ್ಷ ವೆಂಕಟೇಶಪ್ಪ, ಗೌರವಾಧ್ಯಕ್ಷ ವಿ.ಹನುಮಂತಪ್ಪ, ಉಪಾಧ್ಯಕ್ಷ ಈಶ್ವರಪ್ಪ, ಪಧಾನ ಕಾರ್ಯದರ್ಶಿಗಳಾದ ನಾಗರಾಜ್, ಮುತ್ತೂರು ಮಂಜುನಾಥ್, ಬಸವರಾಜ್, ಖಜಾಂಚಿಗಳಾದ ಕೆ. ಸೋಮಶೇಖರ್ ಡಿ.ಸಿ. ರಮೇಶ್ ಕಾರ್ಯದರ್ಶಿ ಬಿ. ಕೆ .ವಿಶ್ವನಾಥ್ ರೊಂದಿಗೆ ಪದಾಧಿಕಾರಿಗಳಾದ ಸಂಜಯ್ ,ಅಕ್ಷಯ್, ವಿಕಾಸ್, ಮುರುಳಿ, ಜಗದೀಶ್, ಸುಬ್ರಮಣ್ಯ, ಹರೀಶ್, ಸುನಿಲ್, ರಾಜು, ಶಿವಕುಮಾರ್, ಗಂಗರಾಜು, ರಾಕೇಶ್, ಮುನಿರಾಜು, ಬಸವರಾಜ್, ಉಮೇಶ್, ನರೇಂದ್ರ ಬಾಬು ,ರಾಘವೇಂದ್ರ, ಶ್ರೀನಿವಾಸ್ ಭಾಗವಹಿಸಿದ್ದರು. ಮುಖ್ಯ ಅತಿಥಿಗಳನ್ನು ಸನ್ಮಾನಿಸಿ ನೆನಪಿನ ಕಾಣಿಕೆಯನ್ನು ನೀಡಲಾಯಿತು .
Comments