ನವಚೇತನಾ ಸೇವಾ ಸಮಿತಿ...ರಂಗೋಲಿ ಸ್ಪರ್ಧೆ ವಿಜೇತರು
ದೊಡ್ಡಬಳ್ಳಾಪುರದ ಟ್ಯಾಂಕ್ ರಸ್ತೆಯಲ್ಲಿರುವ ನವಚೇತನಾ ಸೇವಾ ಸಮಿತಿ ವತಿಯಿಂದ ಆರನೇ ವರ್ಷದ ಗಣೇಶೋತ್ಸವ ಪೂಜೆ ಅಂಗವಾಗಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಮತ್ತು ಮಕ್ಕಳಿಗೆ ನಡೆದ ಬಕೆಟ್ ಗೆ ಬಾಲ್ ಹಾಕುವ ಸ್ಪರ್ಧೆಗಳನ್ನು ದಿನಾಂಕ 14-9-18 ರಂದು ಏರ್ಪಡಿಸಲಾಗಿತ್ತು, ಇಂದು ನಡೆದ ಸರಳ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಳೆ ಬಂದು ಆಟ ರದ್ದಾದ ಕಾರಣಕ್ಕೆ ಮಕ್ಕಳ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಸ್ಕೂಲ್ ಬ್ಯಾಗ್ ನೀಡಲಾಯಿತು, ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ವಿ. ಮಂಜುಳ, ದ್ವಿತೀಯ ಬಹುಮಾನ ಡಿ.ಹರ್ಷಿತ, ಹಾಗೂ ಮೂರನೇ ಬಹುಮಾನವನ್ನು ಬಿ.ಸಿ.ಕವಿತ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ನವಚೇತನಾ ಸೇವಾ ಸಮಿತಿಯ ಅಧ್ಯಕ್ಷ ಸೂರ್ಯಪ್ಪ, ಸುಧಾಕರ್, ಕೃಷ್ಣಮೂರ್ತಿ, ಚಿಕ್ಕಣ್ಣ, ಸತೀಶ್, ಶ್ರೀನಿವಾಸ, ಮತ್ತಿತರ ಪದಾಧಿಕಾರಿಗಳು ಭಾಗವಹಿಸಿದ್ದರು.
Comments