ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಪೆಟ್ರೋಲಿಯಂ ಉತ್ಪನ್ನ ನಿಯಂತ್ರಣವಿಲ್ಲ: ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೋಡ್ಲಹಳ್ಳಿ ಅಶ್ವಥನಾರಾಯಣ ಪೆಟ್ರೋಲ್ ಮತ್ತು ಡೀಸಲ್ ಬೆಲೆ ತಗ್ಗಿಸಿ ಎಂದು ಹೋರಾಟ
ಕೊರಟಗೆರೆ ಸೆ. 10:- ಕೇಂದ್ರದಲ್ಲಿ ಕಾಂಗ್ರೇಸ್ ಅಧಿಕಾರದಲ್ಲಿದ್ದಾಗ ಪೆಟ್ರೋಲಿಯಂ ಉತ್ಪನ್ನಗಳ ಬಹುತೇಕ ನಿಯಂತ್ರಣದಲ್ಲಿದ್ದು ಆದರೆ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ದಿನಂ ಪ್ರತೀ ಹೆಚ್ಚುತ್ತಿದ್ದು ಇದನ್ನು ನಿಯಂತ್ರಿವಲ್ಲಿ ಕೇಂದ್ರ ನಿರ್ಲಕ್ಷ ವಹಿಸಿದೆ ಎಂದು ನಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೋಡ್ಲಹಳ್ಳಿ ಅಶ್ವಥನಾರಾಯಣ ಗುಡುಗಿದರು. ಪಟ್ಟಣದಲ್ಲಿ ತಾಲೂಕು ಬ್ಲಾಕ್ ಕಾಂಗ್ರೇಸ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವವನ್ನು ವಹಿಸಿ ಮಾತನಾಡಿದರು.
ಪಟ್ಟಣದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ತಹಶೀಲ್ದಾರ್ ಕಚೇರಿಯ ವರೆಗೆ ಬಿಜೆಪಿ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಪೆಟ್ರೋಲಿಂ ಉತ್ಪನ್ನಗಳ ಬೆಲೆಯನ್ನು ನಿಯಂತ್ರಣಕ್ಕೆ ತರಬೇಕು ಎಂದು ಒತ್ತಾಯಿಸಿದರು. ನೂರಾರು ಕಾಂಗ್ರೇಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರತಿಭಟನೆಯಲ್ಲಿ ಗ್ರಾಮಾಂತರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅರಕೆರೆ ಸೋಮಶೇಖರ್, ಮಹಿಳಾ ಅಧ್ಯ ಕ್ಷೆ ಜಯಮ್ಮ, ತಾ.ಪಂ ಉಪಾಧ್ಯಕ್ಷ ನರಸಮ್ಮ, ಸದಸ್ಯ ವೆಂಕಟಪ್ಪ, ಪ.ಪಂ ಸದಸ್ಯರಾದ ಎನ್.ಕೆ ನರಸಿಂಹಪ್ಪ, ನಾಗರಾಜು,ಕೆ.ಆರ್ ಓಬಳರಾಜು, ಕಸಬಾ ವಿಎಸ್ ಎಸ್ ಎನ್ ಅಧ್ಯಕ್ಷ ರುದ್ರಪ್ರಸಾದ್, ಮಾಜಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮೈಲಾರಪ್ಪ, ಮುಖಂಡರಾದ ವಾಲೆ ಚಂದ್ರಯ್ಯ, ಕಣವವೆ ಹನುಮಂತರಾಯಪ್ಪ, ಗೀತಾ, ದಿವ್ಯ, ಮಂಜಮ್ಮ, ನಾಗರತ್ನಮ್ಮ, ಸೇರಿದಂತೆ ಇತರರು ಇದ್ದರು.
Comments