ಅಗತ್ಯ ವಸ್ತುಗಳ ಬೆಲೆ ಇಳಿಸಲು ಕೇಂದ್ರ ವಿಫಲ: ಸಿಐಟಿಯು ಮತ್ತು ಸಿಪಿಐಎಂ ಆರೋಪ
ಕೊರಟಗೆರೆ ಸೆ. 10:- ದೇಶದಲ್ಲಿ ಪ್ರತೀನಿತ್ಯ ಅಗತ್ಯವಸ್ತುಗಳ ಬೆಳೆ ಪ್ರತೀ ದಿನ ಏರಿಕೆ ಕಾಣತ್ತಿದ್ದು ಇದನ್ನು ಸರ್ಕಾರ ನಿಯಂತ್ರಿಸಬೇಕು ಎಂದು ಸಿಪಿಐಎಂ ತಾಲೂಕು ಕಾರ್ಯದರ್ಶಿ ನೌಷಾದ್ ಸೆಹಗನ್ ತಿಳಿಸಿದರು. ಪಟ್ಟಣದಲ್ಲಿ ಸಿಪಿಐಎಂ ಮತ್ತು ಸಿಐಟಿಯು ಹಮ್ಮಿಕೊಂಡಿದ್ದ ಕೊರಟಗೆರೆ ಬಂದ್ ನೇತೃತ್ವವನ್ನು ವಹಿಸಿಕೊಂಡು ಮಾತನಾಡಿದರು.
ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಂಡಾವಾಳ ಶಾಹಿಗಳಿಗೆ ಮೊದಲ ಅಧ್ಯತೆಯನ್ನು ನೀಡುತ್ತಿದ್ದು ದೇಶದ ಬಡ ಮತ್ತು ಮದ್ಯಮ ಜನತೆಗೆ ಯಾವದೇ ರೀತಿಯ ಯೋಜನೆಗಳನ್ನು ನೀಡಿಲ್ಲ ಎಂದು ಗುಡುಗಿದರು.
ಕೊರಟಗೆರೆ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ಮೆರವಣಿಗೆ ನಡೆಸಿ ಎಸ್ಎಸ್ ಆರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು.
ಸಿಪಿಐಎಂ ಪಾರ್ಟಿ ಮುಖಂಡರು ಸಂಜೀವಯ್ಯ, ಮಲ್ಲಣ್ಣ, ಸಿಐಟಿಯು ಪದಾಧಿಕಾರಿಗಳಾದ ಅಡವೀಶ್, ಜಯರಾಮಯ್ಯ, ಕಾಂತರಾಜು, ರಾಜಣ್ಣ, ಶುಭ, ಮಂಜಮ್ಮ ಸೇರಿದಂತೆ ಇತರರು ಇದ್ದರು.
Comments