ಕನ್ನಿಕಾ ವಿದ್ಯಾಪೀಠ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ
ಕೊರಟಗೆರೆ ಸೆ.8:-ಶಿಕ್ಷಕ ಮನಸ್ಸು ಮಾಡಿದರೆ ಇಡೀ ದೇಶವನ್ನೇ ಬದಲು ಮಾಡಬಹುದು ಎಂದು ಕನ್ನಿಕಾ ವಿದ್ಯಾಪೀಠ ಕಾರ್ಯದರ್ಶಿ ಕೆ.ಎಸ್.ವಿ ರಘು ತಿಳಿಸಿದರು. ಪಟ್ಟಣ ಕನ್ನಿಕಾ ವಿದ್ಯಾಪೀಠ ಶಾಲೆಯಲ್ಲಿ ಶನಿವಾರ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಕರಿಗೆ ಮಕ್ಕಳ ವತಿಯಿಂದ ಹಮ್ಮಿಕೊಂಡಿದ್ದ ವಿವಿಧ ಆಟೋಟ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಇಡೀ ವಿಶ್ವಕ್ಕೆ ಭಾರತ ಇಂದು ಸ್ಪರ್ಧೆ ನೀಡುತ್ತಿರುವುದು ನಮ್ಮಲ್ಲಿನ ಉತ್ತಮ ವಿದ್ಯಾರ್ಥಿಗಳಿಂದ. ಇಡೀ ವಿಶ್ವದಲ್ಲಿಯೇ ಅತೀ ಹೆಚ್ಚು ಡಾಕ್ಟರ್ ಮತ್ತು ಇಂಜಿನಿಯರ್ ಗಳನ್ನು ಸೃಷ್ಟಿಸುತ್ತಿರುವ ದೇಶ ಭಾರತ, ಪ್ರತೀ ದೇಶದಲ್ಲಿಯೂ ಇಂದು ಭಾರತೀಯ ಮೂಲದವರು ಸಿಗುತ್ತಾರೆ ಇದಕ್ಕೆಲ್ಲಾ ಮೂಲ ಕಾರಣ ನಮ್ಮಲ್ಲಿನ ಶಿಕ್ಷಣ ಪದ್ಧತಿ ಇದೇ ರೀತಿ ಶಾಲೆಯಲ್ಲಿನ ಪ್ರತೀ ಶಿಕ್ಷಕರು ತಮ್ಮ ಬೋಧನಾ ಸಾಮಥ್ಯವನ್ನು ವೃದ್ಧಿಸಿಕೊಂಡು ಮಕ್ಕಳಿಗೆ ಉತ್ತಮ ರೀತಿಯಲ್ಲಿ ಪಾಠ ಮಾಡಬೇಕು ಎಂದು ಸಲಹೆ ನೀಡಿದರು.
ಮುಖ್ಯ ಶಿಕ್ಷಕ ಡಿ.ಎಂ ರಾಘವೇಂದ್ರ ಮಾತನಾಡಿ ಪ್ರತೀ ಹಂತದಲ್ಲಿಯೂ ಮಕ್ಕಳು ಶಿಕ್ಷಕನ್ನು ಅನುಕರಿಸುತ್ತಾರೆ… ಶಿಕ್ಷಕನಾದವನು ಮಕ್ಕಳಿಗೆ ಪ್ರೋತ್ಸಾಹದಾಯಕ… ಉತ್ತೇಜನದಾಯಕನಾಗಿ ಇರಬೇಕು… ಪ್ರತಿಯೊಂದು ಮಗುವಿನಲ್ಲಿಯೂ ವಿಶಿಷ್ವ ತೆ ಇರುತ್ತದೆ ಶಿಕ್ಷಕರು ಇದನ್ನು ಗುರುತಿಸುವ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾಗಿ ತರಕಾರಿ ತಿನ್ನುವುದು, ಹಗ್ಗ ಜಕ್ಕಾಟ, ಬಲೂನ್ ಬ್ಲಾಸ್ಟ್, ಮೂಜಿಕಲ್ ಚೇರ್ ಸೇರಿದಂತೆ ಇತರೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತ ಶಿಕ್ಷಕರಿಗೆ ಬಹುಮಾನಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕಿಯರಾದ ಶಾರದ, ಉಮಾದೇವಿ, ರಾಧಾ, ಭಾರತಿ ರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಸಂಪೂರ್ಣ ನಿರ್ವಹಣೆಯನ್ನು ಮಕ್ಕಳು ನಡೆಸಿದರು.
Comments