ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡರಿಗೆ ಏನಾಗಿದೆ...????
ಕೊರಟಗೆರೆ ಸೆ. 10:- ವಿಧಾನ ಸಭಾ ಚುನಾವಣೆ ಸೋಲಿನಿಂದ ತುಮಕೂರು ಮಾಜಿ ಶಾಸಕ ಸುರೇಶ್ ಗೌಡ ಹತಾಷರಾಗಿ ಏನೇನೋ ಮಾತನಾಡುತ್ತಿದ್ದಾರೆ ಎಂದು ನಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೋಡ್ಲಹಳ್ಳಿ ಅಶ್ವಥನಾರಾಯಣ್ ತಿಳಿಸಿದರು.
ಪಟ್ಟಣದಲ್ಲಿ ಭಾನುವಾರ ಮಾಜಿ ಶಾಸಕ ಸುರೇಶ್ ಗೌಡ ಮತ್ತು ಮಾಜಿ ಸಂಸದ ಜಿ.ಎಸ್ ಬಸವರಾಜು ಉಪಮಖ್ಯಂತ್ರಿ ಪರಮೇಶ್ವರ್ ವಿರುದ್ದ ಸತ್ಯಕ್ಕೆ ದೂರವಾದ ಆರೋಪ ಮತ್ತು ಏಕವಚನ ಪ್ರಯೋಗ ಮಾಡಿರುವುದರ ವಿರುದ್ದ ಪ್ರವಾಸಿ ಮಂದಿರದಲ್ಲಿ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಪರಂಮೇಶ್ವರ್ ರನ್ನು ಡೋಂಗಿ ರಾಜಕಾರಣೆ ಎಂದು ಪದ ಪ್ರಯೋಗ ಮಾಡಿದ್ದಾರೆ ಇದು ಒರ್ವ ಗೌರವಯುತವಾದ ಸ್ಥಾನದಲ್ಲಿರುವ ವ್ಯಕ್ತಿಗೆ ಈ ರೀತಿ ಮಾತಿನ ಪ್ರಯೋಗ ಸಲ್ಲ ಇದು ಸುರೇಶ್ ಗೌಡರಿಗೆ ಶೋಭೆ ತರುವುದಿಲ್ಲ ಎಂದರು.
ಗ್ರಾಮಾಂತರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅರಕೆರೆ ಸೋಮಶೇಖರ್ ಮಾತನಾಡಿ ಇತ್ತೀಚೆಗೆ ಮಾಜಿ ಶಾಸಕ ಸುರೇಶ್ ಗೌಡರಿಗೆ ನಮ್ಮ ಕಾಂಗ್ರೇಸ್ ನ ಮಾಜಿ ಶಾಸಕರಾದ ಕೆ.ಎನ್ ರಾಜಣ್ಣ, ಜಯಚಂದ್ರ ಬಗ್ಗೆ ಅನುಕಂಪಬಂದಿದೆ ಆದರೆ ಅವರದೇ ಪಕ್ಷದ 3 ಬಾರಿ ಶಾಸಕರಾಗಿರುವ ಸೊಗಡು ಶಿವಣ್ಣರ ಬಗ್ಗೆ ಯಾವುದೇ ಅನುಕಂಪವಿಲ್ಲ ಎಂದು ಕುಟುಕಿದರು.
ಪಕ್ಷದ ವಿಚಾರವಾಗಿ ಏನನ್ನಾದರೂ ಮಾತನಾಡಲಿ ಸುರೇಶ್ ಗೌಡ ಮತ್ತು ಬಸವರಾಜು ಪರಮೇಶ್ವರ್ ಅವರನ್ನು ಏಕವಚನ ಮತ್ತು ವೈಯಕ್ತಿಕ ವಿಚಾರವಾಗಿ ನಿಂದಿಸಿದರೆ ಉಗ್ರಹೋರಾಟದ ಮೂಲಕ ಉತ್ತರಿಸಬೇಕಾಗುತ್ತದೆ ಎಂದರು.
ಸಭೆಯಲ್ಲಿ ಮಹಿಳಾ ಅಧ್ಯಕ್ಷ ಜಯಮ್ಮ, ಪ.ಪಂ ಸದಸ್ಯ ಎನ್.ಕೆ ನರಸಿಂಹಪ್ಪ, ಕೆ.ಆರ್ ಓಬಳರಾಜು, ನಾಗರಾಜು, ಕಸಬಾ ವಿಎಸ್ಎಸ್ ನ್ ಅಧ್ಯಕ್ಷ ರುದ್ರಪ್ರಸಾದ್, ಮುಖಂಡರಾದ ಎಲ್.ರಾಜಣ್ಣ, ಗೊಡ್ರಹಳ್ಳಿ ಉಮಾಶಂಕರ್, ವೀರಣ್ಣಗೌಡ, ರಾಮಲಿಂಗಯ್ಯ ಸೇರಿದಂತೆ ಇತರರು ಇದ್ದರು. ( ಚಿತ್ರ ಇದೆ)
10ಕೆಆರ್ ಟಿ ಚಿತ್ರ4:- ಮಾಜಿ ಸಂಸದ ಜಿ.ಎಸ್ ಬಸವರಾಜು ಮತ್ತು ಮಾಜಿ ಶಾಸಕ ಸುರೇಶ್ ಗೌಡ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ವಿರುದ್ದ ನೀಡಿದ್ದ ಹೇಳಿಕೆಗಳನ್ನು ಖಂಡಿಸಿ ನಗರ ಬ್ಲಾಕ್ ಘಟಕದ ಅಧ್ಯಕ್ಷ ಕೋಡ್ಲಹಳ್ಳಿ ಅಶ್ವತ್ ನಾರಾಯಣ, ಗ್ರಾಮಾಂಗರ ಸೋಮಶೇಖರ್ ನೇತೃತ್ವದಲ್ಲಿ ಸಭೆ ನಡೆಸಿದ ಕಾಂಗ್ರೇಸ್ ಕಾರ್ಯಕರ್ತರು.
Comments