ಬಂದ್ ಮಾಡಿಸಿದ ಕಾಂಗ್ರೆಸ್....ಸಹಕರಿಸಿದ ಜೆಡಿಎಸ್, ಸಿ.ಪಿ.ಎಂ.ಐ.
ದೊಡ್ಡಬಳ್ಳಾಪುರದ ಕಾಂಗ್ರೆಸ್ ಪಕ್ಷದ ವತಿಯಿಂದ ಇಂದು ಕೇಂದ್ರ ಸರ್ಕಾರದ ವಿದುದ್ಧ ಪ್ರತಿಭಟನೆ ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ನಡೆಯಿತು, ಬೆಲೆ ಹೆಚ್ಚಿದ್ದರೂ ಊರತುಂಬಾ ಬೈಕ್ ರ್ಯಾ ಲಿ ನಡೆಸಿದರು, ನಗರ ಬ್ಲಾಕ್ ಅಧ್ಯಕ್ಷ ಅಶೋಕ್, ಕೆ.ಪಿ.ಸಿ.ಸಿ ಸದಸ್ಯ ಶ್ರೀನಿವಾಸ್, ರಂಗರಾಜು ಮತ್ತಿತರರು ಜೊತೆಗಿದ್ದರು, ಜೆಡಿಎಸ್ ಪಕ್ಷದ ವತಿಯಿಂದ ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಮುನೇಗೌಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು, ನಗರ ಅಧ್ಯಕ್ಷ ರವಿಕುಮಾರ್, ಕಾರ್ಯಾಧ್ಯಕ್ಷ ಪಿ.ಸಿ.ಲಕ್ಷ್ಮೀನಾರಾಯಣ್, ನಗರಸಭಾ ಸದಸ್ಯರಾದ ಶಿವಕುಮಾರ್,ಮಲ್ಲೇಶ್, ಕೆಂಪರಾಜು, ಸುಶೀಲ, ಭಾಸ್ಕರ್ ನಗರಸಭೆ ಅಧ್ಯಕ್ಷ ಪ್ರಭುದೇವ್, ಪಕ್ಷದ ತಾಲ್ಲೂಕಿನ ಪದಾಧಿಕಾರಿಗಳು ಹಾಜರಿದ್ದರು,
ಕರ್ನಾಟಕ ಸರ್ಕಾರವೇ ಮುಂದೆ ನಿಂತು ನೆಡೆಸಿದ ಬಂದ್, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದಿನದಿನಕ್ಕೂ ಹೆಚ್ಚುತ್ತಾ ಹೋಗುತ್ತಿವೆ, ಅದಕ್ಕೆ ಕಾರಣ ಭಾರತ ಸರ್ಕಾರದ ಅಂತರ ರಾಷ್ಟ್ರೀಯ ಹಣಕಾಸಿನ ನೀತಿಗಳೂ ಕಾರಣವಾಗುತ್ತದೆ, ಈ ಹಿಂದೆ ಎಪ್ಪತ್ತು ವರ್ಷ ಆಳ್ವಿಕೆ ನಡೆಸಿದ ಸರ್ಕಾರಗಳು ಅವರು ಮಾಡಿದ ನೀತಿ ನಿಯಮಗಳು ಮುಖ್ಯ ಕಾರಣ, ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಮತ್ತು ಡಾಲರ್ ಬೆಲೆ ಪ್ರತಿದಿನ ಏರುತ್ತಾ ಹೋಗುತ್ತಿದೆ, ಹಾಗಾದಾಗ ಬೆಲೆ ನಿಯಂತ್ರಣ ಮಾಡುವುದು ಕಷ್ಟ. ಯಾವುದೇ ಸರ್ಕಾರ ಇರಲಿ ಡಾಲರ್ ರೂಪದಲ್ಲೇ ತೈಲ ಕೊಳ್ಳಬೇಕು. ಇದೆಲ್ಲಾ ಕಾಂಗ್ರೆಸ್ ಪಕ್ಷದ ನಾಯಕರಿಗೆ ಗೊತ್ತಿಲ್ಲದ್ದೇನಲ್ಲ. ಅವರಿಗೆ ಮೋದಿ ಕಾಲೆಳೆಯಲು ಕಾರಣ ಬೇಕು ಸರಿಯೋ ತಪ್ಪೋ ವಿವೇಚನೆ ಇಲ್ಲದೆ ಎಲ್ಲಕ್ಕೂ ವಿರೋಧ, ಪ್ರತಿಭಟನೆ ಹಾಗೇ ಇದೂ ಕೂಡ.
ದೇಶದ ಏನಾದರೆ ನಮಗೇನು, ಅಧಿಕಾರ ಮುಖ್ಯ ಅದಿಲ್ಲದೆ ಪರಿತಪಿಸುತ್ತಿರುವ ಕಾಂಗ್ರೆಸ್ ಮತ್ತು ಅವರ ಮಹಾ ಘಟಭಂದನದ ಮಿತ್ರ ಪಕ್ಷಗಳು ಇಂದು ಭಾರತ ಬಂದ್ ಮಾಡಿದರು. ಬೆಲೆ ನಿಯಂತ್ರಿಸಲು ಈ ಪಕ್ಷಗಳ ಹತ್ತಿರ ಏನಾದರೂ ಪರಿಹಾರ ಇದೆಯಾ? ಇಲ್ಲಾ... ಇರುವ ಒಂದು ಮಾರ್ಗ, ಪೆಟ್ರೋಲ್ ಡೀಸೆಲ್ ಗಳನ್ನು ಜಿಎಸ್ ಟಿ ವ್ಯಾಪ್ತಿಗೆ ತರಲು ಇಪ್ಪಿಗೆ ಇದೆಯಾ? ಇಲ್ಲಾ...ಸಾಲ ಮಾಡು, ಅದಕ್ಕೆ ಬಡ್ಡಿ ಕಟ್ಟು, ಜನರಿಗೆ ಪುಗಸೆಟ್ಟೆ ಭಾಗ್ಯ ನೀಡು....ಒಂದಿಷ್ಟು ಕಮೀಷನ್ ಹೊಡಿ ಇವಿಷ್ಟೆ ಆಲೋಚನೆ.
ನಮ್ಮೂರಲ್ಲೂ ಕಾಂಗ್ರೆಸ್, ಜೆಡಿಎಸ್, ಸಿ.ಪಿ.ಐ.ಎಂ ಪಕ್ಷಗಳು ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು, ಪ್ರಧಾನ ಮಂತ್ರಿ ಮೋದಿಗೆ ದಿಕ್ಕಾರ ಕೂಗಿದರು, ಮೋದಿಯಿಂದಾಗಿ ದೇಶವೇ ನರಳುತ್ತಿದೆ, ಬೆಲೆಗಳು ಆಕಾಶಕ್ಕೇರಿವೆ, ಜನರಿಗೆ ಬದುಕಲು ಕಷ್ಟವಾಗುತ್ತಿದೆ, ನೋಟ್ ಬ್ಯಾನ್ ಮಾಡಿದ್ದಕ್ಕೆ ದೇಶದ ಅರ್ಧ ಜನರು ಬೀದಿಗೆ ಬಿದ್ದರು, ಜಿಎಸ್ ಟಿ ತಂದು ಉಳಿದವರನ್ನು ಹಾಳು ಮಾಡಿದರು ಎಂದು ದಿಕ್ಕಾರ ಕೂಗಿದರು.
Comments