ನಗರಸಭೆ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಎನ್.ಕೆ.ರಮೇಶ್ ಆಯ್ಕೆ
ನಗರಸಭಾ ಸದಸ್ಯ ಎನ್.ಕೆ.ರಮೇಶ್ ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದರು, ಇಂದು ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು. ನಾಮಪತ್ರದಲ್ಲಿ ಸೂಚಕರಾಗಿ ಸದಸ್ಯ ಮಲ್ಲೇಶ್ ಮತ್ತು ಅನುಮೋದಕರಾಗಿ ವೆಂಕಟರಾಜು ಸಹಿಹಾಕಿದ್ದರು, ಅಧ್ಯಕ್ಷ ತ.ನ.ಪ್ರಭುದೇವ್ ಮಾತನಾಡಿ ಎಲ್ಲ ನಗರಸಭಾ ಸದಸ್ಯರನ್ನೂ ಒಂದೇ ಎಂದು ಭಾವಿಸಿ ಕೆಲಸ ನಿರ್ವಹಿಸಲು ಸಲಹೆ ನೀಡಿ ಶುಭಕೋರಿದರು.
ಉಪಾಧ್ಯಕ್ಷೆ ಜಯಲಕ್ಷ್ಮಿ, ಸದಸ್ಯರಾದ ಕೆಂಪರಾಜು, ಮಲ್ಲೇಶ್, ವೆಂಕಟರಾಜು ಉಳಿದ ಸ್ಥಾಯಿ ಸಮಿತಿ ಸದಸ್ಯರು, ನಗರಸಭೆ ಅಧಿಕಾರಿಗಳು ಹಾಜರಿದ್ದು ನೂತನ ಅಧ್ಯಕ್ಷ ರಮೇಶ್ ರನ್ನು ಅಭಿನಂದಿಸಿದರು. ಹಿತೈಷಿಗಳು, ಅಭಿಮಾನಿಗಳು, ಬಾಜಪ ಕಾರ್ಯಕರ್ತರು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ನೇಕಾರ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಕೃಷ್ಣ ಕುಮಾರ್, ಕಾರ್ಯದರ್ಶಿ ನಾಗರಾಜ್ ಮತ್ತು ಪದಾಧಿಕಾರಿಗಳು ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು, ಆಯ್ಕೆಯಾಗಿರುವ ಶ್ರೀ ಎನ್ .ಕೆ .ರಮೇಶ್ ಯಾದವ್ ರವರಿಗೆ ಬೆಂಬಲ ನೀಡಲು ಮತ್ತು ಅಭಿನಂದನೆ ಕೋರಲು ಎಲ್ಲಾ ಯಾದವ ಹಿರಿಯ ಮುಖಂಡರುಗಳು, ಯುವ ಸ್ನೇಹಿತರು ಬಂದು ಶುಭಕೋರಿದರು.
ದೊಡ್ಡಬಳ್ಳಾಪುರ ತಾಲ್ಲೂಕು ಯಾದವ (ಗೊಲ್ಲ) ಸಂಘ ರಿ. ಮತ್ತು ದೊಡ್ಡಬಳ್ಳಾಪುರ ತಾಲ್ಲೂಕು ಯಾದವ ಯುವಕರ ಸಂಘ ರಿ. ಪದಾಧಿಕಾರಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.
Comments