ಬನ್ನಿಮಂಗಲ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಶ್ರೀ ಸೀತಾರಾಮ ಕಲ್ಯಾಣೋತ್ಸವ







ಬನ್ನಿಮಂಗಲ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಇಂದು ಎರಡನೇ ವರ್ಷದ ಶ್ರೀ ಸೀತಾರಾಮ ಕಲ್ಯಾಣೋತ್ಸವ ವಿಜೃಂಭಣೆಯಿಂದ ನಡೆಯಿತು, ವೇದಬ್ರಹ್ಮ ವಾಸುದೇವಾಚಾರ್ ಮತ್ತು ಮಕ್ಕಳು ಕಲ್ಯಾಣೋತ್ಸವ ನಡೆಸಿಕೊಟ್ಟರು, ಬೆಳಿಗ್ಗೆ ಎಂಟು ಘಂಟೆಗೆ ವರಪೂಜೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮಗಳು ಮಧ್ಯಾನ್ಹ 1-09 ರಿಂದ 1-30 ರೊಳಗೆ ಸಲ್ಲುವ ಶುಭ ಧನಸ್ಸು ಲಗ್ನದಲ್ಲಿ ಮಾಂಗಲ್ಯ ಧಾರಣೆ ನಡೆಸಲಾಯಿತು, ಬನ್ನಿಮಂಗಲ ಗ್ರಾಮಸ್ಥರು, ಶ್ರೀ ಆಂಜನೇಯಸ್ವಾಮಿ ಒಕ್ಕಲು ಕುಲಬಾಂಧವರು ಮತ್ತು ಭಕ್ತಾದಿಗಳು ಸೇರಿ ಕಲ್ಯಾಣೋತ್ಸವ ನರವೇರಿಸಿದರು. ಶ್ರಾವಣಮಾಸದ ಕೊನೆಯ ಶನಿವಾರದ ಪ್ರಯುಕ್ತ ಶ್ರೀ ಆಂಜನೇಯಸ್ವಾಮಿಗೆ ಉದ್ದಿನವಡೆ ಅಲಂಕಾರ, ಶ್ರೀ ಗಣೇಶ ಮೂರ್ತಿಗೆ ಕರ್ಜಿಕಾಯಿ ಅಲಂಕಾರ, ಶ್ರೀ ಚಕ್ರ ಮಾರಮ್ಮ ದೇವಿಗೆ ತರಕಾರಿ ಅಲಂಕಾರ ಏರ್ಪಡಿಸಲಾಗಿತ್ತು, ದೇವಸ್ಥಾನದ ಅಧ್ಯಕ್ಷ ಮುನಿಆಂಜಿನಪ್ಪ, ಬ್ಯಾಡರಹಳ್ಳಿ ಹಾಗೂ ಟ್ರಸ್ಟ್ ಕಾರ್ಯದರ್ಶಿ ಬೇಗಲಿ ವಿಜಯಕುಮಾರ್ ಹಾಜರಿದ್ದರು, ಕಲ್ಯಾಣೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು, ದೇವನಹಳ್ಳಿ, ದೊಡ್ಡಬಳ್ಳಾಪುರ, ಬೆಂಗಳೂರು, ಯಲಹಂಕ,ಮೈಸೂರು, ರಾಮನಗರದಿಂದ ಭಕ್ತರು ಆಗಮಿಸಿದ್ದರು.
Comments