ಏಳಿ.. ಎದ್ದೇಳಿ... ಗುರಿ ಮುಟ್ಟುವ ತನಕ ನಿಲ್ಲದಿರಿ, ವಿವೇಕ ವಾಣಿಯನ್ನು ನೆನಪಿಸಿದ ನಿತ್ಯಾನಂದ ವಂಶಿ







ಸೆಪ್ಟೆಂಬರ್ 11, 1893 ರಂದು ಸ್ವಾಮಿ ವಿವೇಕಾನಂದರು ತಮ್ಮ ಚಿಕಾಗೋ ಭಾಷಣದಲ್ಲಿ ಭಾರತದ ಸನಾತನ ಧರ್ಮದ ಸಾರವನ್ನ ಜಗತ್ತಿಗೆ ತಿಳಿಸಿದ ದಿನ. ಆ ಐತಿಹಾಸಿಕ ಭಾಷಣಕ್ಕೆ ಈ ವರ್ಷ 125 ನೇ ವರ್ಷವಾಗಿರುವ ನೆನಪಿಗಾಗಿ ಯುವಾ ಬ್ರಿಗೇಡ್ ಮತ್ತೊಮ್ಮೆ ದಿಗ್ವಿಜಯ ಹೆಸರಿನಲ್ಲಿ ಸ್ವಾಮಿಜಿ ಹಾಗೂ ಸ್ವಾಮಿ ವಿವೇಕಾನಂದರಿಂದ ಪ್ರೇರಿತಳಾಗಿ ಭಾರತೀಯರ ಸೇವೆಯಲ್ಲಿ ತನ್ನ ಬದುಕನ್ನೇ ಸಮರ್ಪಿಸಿದ ಅಕ್ಕ ನಿವೇದಿತಾಳ 150 ನೇ ಜಯಂತಿ ರಥಯಾತ್ರೆಯು ಇಂದು ನಗರದಲ್ಲಿ ಸಂಚರಿಸಿತು.
ಬೆಳಿಗ್ಗೆ 9.30 ಕ್ಕೆ ಶೋಭಾಯಾತ್ರೆ ರಥವನ್ನು ಅಯ್ಯಪ್ಪ ಸ್ವಾಮಿ ದೇವಾಲಯ ಮುಂಭಾಗದಲ್ಲಿ ವಿದ್ಯಾರ್ಥಿಗಳು ಪೂರ್ಣಕುಂಭದೊಂದಿಗೆ ಹೂಗಳನ್ನು ಸಮರ್ಪಿಸಿ ಸ್ವಾಗತಿಸಿದರು, ಮೆರವಣಿಗೆ ತಾಲ್ಲೂಕು ಕಛೇರಿ ರಸ್ತೆಯಲ್ಲಿ ಹೊರಟು ಮುಖ್ಯ ರಸ್ತೆ ಮಾರ್ಗವಾಗಿ ಬೆಸ್ತರ ಪೇಟೆಯಲ್ಲಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಯ ಬಳಿ ಕೊನೆಗೊಂಡಿತು, ಮೆರವಣಿಗೆಯಲ್ಲಿ ಸ್ವಾಮಿ ವಿವೇಕಾನಂದ ಆಂಗ್ಲ ಪ್ರೌಢಶಾಲೆಯ ಮಕ್ಕಳು, ಅಧ್ಯಾಪಕರು, ಯುವ ಬ್ರಿಗೇಡ್ ಪದಾಧಿಕಾರಿಗಳು, ಹಿಂದೂ ಜಾಗರಣಾ ವೇಧಿಕೆ ಸದಸ್ಯರು, ಸಾರ್ವಜನಿಕರು ಭಾಗವಹಿಸಿ. ವಿವೇಕಾನಂದರ ಪ್ರತಿಮೆಗೆ ಪುಷ್ಪ ಸಮರ್ಪಿಸಿ ರಥವನ್ನು ಮುಂದಿನ ಊರಿಗೆ ಕಳುಹಿಸಿ ಕೊಟ್ಟರು. ನಂತರ 11 ಘಂಟೆಗೆ ಸಭಾ ಕಾರ್ಯಕ್ರಮ ವಿವೇಕಾನಂದ ಶಾಲೆಯ ಸಭಾಂಗಣದಲ್ಲಿ ನಡೆಯಿತು, ಅಧ್ಯಕ್ಷತೆಯನ್ನು ವಕೀಲ ರವಿ ಮಾವಿನಕುಂಟೆ ವಹಿಸಿದ್ದರು, ಎಂ.ಬಿ.ಗುರುದೇವ್ ಮತ್ತು ಹುಲಿಕಲ್ ನಟರಾಜ್ ಉಪಸ್ಥಿತಿಯಲ್ಲಿ ದಿಕ್ಸೂಚಿ ಭಾಷಣವನ್ನು ನಿತ್ಯಾನಂದ ವಿವೇಕ ವಂಶಿ ಮಾಡಿ ಭಾರತದ ಗೌರವವನ್ನು ಉತ್ತುಂಗಕ್ಕೇರಿಸಿದ ಸಿಡಿಲ ಸಂತನ ವಾಣಿಯನ್ನು ಸ್ಮರಿಸಿದರು, ಹಿರಿಯ ವೈಧ್ಯರಾದ ಹುಂಗಿ ಈಶ್ವರ್ ಎಲ್ಲ ಅಥಿತಿಗಳಿಗೆ ಶಾಲು ಹಾಕಿ ಗೌರವ ಸಲ್ಲಿಸಿದರು. ಯುವ ಬ್ರಿಗೇಡ್ ಸಂಚಾಲಕ ಚೇತನ್, ಎಂ.ಕೆ.ವತ್ಸಲ, ದಾಕ್ಷಾಯಿಣಿ, ಕಮಲ, ಲೀಲಾ ಮಹೇಶ್, ಬಚ್ಚಳ್ಳಿ ಕೆಂಪೇಗೌಡ, ಕಶ್ಯಪ್, ಬೇಗಲಿ ಮಧು, ರಮೇಶ್ ಮತ್ತಿತರರು ಭಾಗವಹಿಸಿದ್ದರು.
Comments