ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಮತ್ತು ಶ್ರೀ ಆಂಜನೇಯಸ್ವಾಮಿಯ ವಿಶೇಷ ಬೆಣ್ಣೆ ಅಲಂಕಾರ





ದೊಡ್ಡಬಳ್ಳಾಪುರದ ಖಾಸ್ ಭಾಗ್ ಹತ್ತಿರ ಇರುವ ರಾಮಣ್ಣನ ಬಾವಿಗೆ ಅಂಟಿಕೊಂಡಿರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಸುಮಾರು ಮುನ್ನೂರು ವರ್ಷಗಳ ಇತಿಹಾಸವುಳ್ಳ ದೇವಾಲಯ, ಈ ದೇವಸ್ಥಾನಕ್ಕೆ ಪ್ರತಿ ಶನಿವಾರಗಳಲ್ಲಿ, ಶ್ರಾವಣಮಾಸ ಮತ್ತು ಕಾರ್ತಿಕಮಾಸದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಾರೆ, ಶ್ರಾವಣಮಾಸದ ಪ್ರಯುಕ್ತ ಎರಡನೇ ಶನಿವಾರದಂದು ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಮತ್ತು ಶ್ರೀ ಆಂಜನೇಯಸ್ವಾಮಿಯ ವಿಶೇಷ ಬೆಣ್ಣೆ ಅಲಂಕಾರವನ್ನು ದೇವನಹಳ್ಳಿ ಪಿಳ್ಳಮ್ಮ ಕುಟುಬದವರಿಂದ ಹಾಗೂ ಮೂರನೇ ಶನಿವಾರ ಸಂಕಣ್ಣನವರ ನಾಗರತ್ನಮ್ಮ ಮತ್ತು ಕುಟುಂಬದವರಿಂದ ಏರ್ಪಡಿಸಲಾಗಿತ್ತು. ಬೆಳಗಿನಿಂದಲೇ ನೂರಾರು ಮಂದಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದರ್ಶನಪಡೆದುಕೊಂಡರು. ಬಂದ ಭಕ್ತಾದಿಗಳಿಗೆ ಸೇವಾಕರ್ತರು ಪ್ರಸಾದ ವ್ಯವಸ್ಥೆ ಮಾಡಿದ್ದರು.
Comments